varthabharthi


ಅಂತಾರಾಷ್ಟ್ರೀಯ

​ಪರಮಾಣು ಒಪ್ಪಂದ ಮಾತುಕತೆ ಪುನರಾರಂಭಕ್ಕೆ ಇರಾನ್-ಇಯು ಒಪ್ಪಿಗೆ

ವಾರ್ತಾ ಭಾರತಿ : 25 Jun, 2022

ಟೆಹ್ರಾನ್, ಜೂ.25: ಪರಮಾಣು ಒಪ್ಪಂದ ಮಾತುಕತೆಯ ಪುನರಾರಂಭಕ್ಕೆ ಇರಾನ್ ಮತ್ತು ಯುರೋಪಿಯನ್ ಯೂನಿಯನ್ ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿದೆ. ಶನಿವಾರ ಜಂಟಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಇರಾನ್ನ ವಿದೇಶಾಂಗ ಸಚಿವ ಹೊಸೈನ್ ಅಮೀರಬ್ದುಲ್ಲಾಹಿಯಾನ್ ಮತ್ತು ಯುರೋಪಿಯನ್ ಯೂನಿಯನ್ನ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೋರೆಲ್, 2015ರ ಪರಮಾಣು ಒಪ್ಪಂದದ ಮರುಸ್ಥಾಪನೆ ಕುರಿತ ಇರಾನ್ ಮತ್ತು ಅಮೆರಿಕದ ನಡುವಿನ ಪರೋಕ್ಷ ಮಾತುಕತೆ ಪುನರಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ಘೋಷಿಸಿದರು.

 ಆದರೆ, ಇರಾನ್ ಮತ್ತು ಅಧ್ಯಕ್ಷ ಇಬ್ರಾಹಿಂ ರೈಸಿ ಸರಕಾರಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಯಾವುದೇ ಅಂಶವೂ ಸ್ವೀಕಾರಾರ್ಹವಲ್ಲ ಎಂದು ಇರಾನ್ ಇದೇ ಸಂದರ್ಭ ಸ್ಪಷ್ಟಪಡಿಸಿದೆ. ಒಪ್ಪಂದದ ಅಂತಿಮ ಹಂತವನ್ನು ತಲುಪಲು ಅಮೆರಿಕದ ಕಡೆಯವರು ಈ ಬಾರಿ ವಾಸ್ತವಿಕವಾಗಿ ಮತ್ತು ತಕ್ಕಮಟ್ಟಿಗೆ ಬದ್ಧ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಆಶಿಸುವುದಾಗಿ ಇರಾನ್ನ ವಿದೇಶಾಂಗ ಸಚಿವರು ಹೇಳಿದ್ದಾರೆ. 

ಪರಮಾಣು ಒಪ್ಪಂದದ ಮರುಸ್ಥಾಪನೆಯಿಂದ ಈ ಪ್ರದೇಶ ಹಾಗೂ ಪ್ರಪಂಚಕ್ಕೆ ಪ್ರಯೋಜನವಾಗಲಿದೆ. ಒಪ್ಪಂದ ಅನುಷ್ಟಾನಗೊಂಡು ಇರಾನ್ನ ಮೇಲಿನ ನಿರ್ಬಂಧ ತೆರವುಗೊಂಡ ಬಳಿಕ ಇರಾನ್ಗೆ ಮತ್ತೆ ಬಂದು ಇರಾನ್-ಯುರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಸಂಬಂಧ ವೃದ್ಧಿಸುವ ಬಗ್ಗೆ ಮಾತುಕತೆ ನಡೆಸಲು ಕಾತರನಾಗಿರುವುದಾಗಿ ಬೋರೆಲ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)