ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ನಿವೃತ್ತ ಶಿಕ್ಷಕ ಹಾಜಿ ಮೊಹಮ್ಮದ್ ಪಾಟ್ರೆಕೋಡಿಗೆ ಸನ್ಮಾನ
ಬಂಟ್ವಾಳ : ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇದರ ವತಿಯಿಂದ ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷಕ ಹಾಜಿ ಮೊಹಮ್ಮದ್ ಮಾಸ್ಟರ್ ಪಾಟ್ರೆಕೋಡಿ ಅವರನ್ನು ಬಂಟ್ವಾಳ ಪಾಟ್ರೆಕೋಡಿಯ ಅವರ ನಿವಾಸದಲ್ಲಿ ಸೇವಾಬದುಕಿನ ಅನುಭವಗಳನ್ನು ದಾಖಲಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ, ಪೂರ್ವಾಧ್ಯಕ್ಷರಾದ ಮೊಹಮ್ಮದ್ ತುಂಬೆ, ಸಮೀಯುಲ್ಲಾ, ಸದಸ್ಯರಾದ ಅಬ್ದುಲ್ ಮಜೀದ್ ಎಸ್, ನೂರುದ್ದೀನ್ ಅಕ್ಕರಂಗಡಿ, ಇರ್ಷಾದ್ ಮೆಲ್ಕಾರ್ ಉಪಸ್ಥಿತರಿದ್ದರು.
Next Story