varthabharthi


ರಾಷ್ಟ್ರೀಯ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್

ವಾರ್ತಾ ಭಾರತಿ : 26 Jun, 2022

(ರೋಹಿತ್ ಶರ್ಮಾ - PTI)

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಿಂದ ಶನಿವಾರ ದೃಢಪಟ್ಟಿದೆ.‌

ಭಾರತ ಕ್ರಿಕೆಟ್ ತಂಡ ವಾಸ್ತವ್ಯ ಹೂಡಿರುವ ಹೋಟೆಲ್‍ನಲ್ಲಿ ಶರ್ಮಾ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತ ಮತ್ತು ಲೀಸ್ಟರ್‍ಶೈರ್ ನಡುವಿನ ಅಭ್ಯಾಸ ಪಂದ್ಯದ ಮೂರನೇ ದಿನದ ಕೊನೆಯ ವೇಳೆಗೆ ಬಿಸಿಸಿಐ ಈ ಬೆಳವಣಿಗೆಯನ್ನು ಟ್ವಿಟ್ಟರ್‌ ನಲ್ಲಿ ಬಹಿರಂಗಪಡಿಸಿದೆ.

"ಶನಿವಾರ ನಡೆದ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (ಆರ್‍ಟಿಎ)ನಲ್ಲಿ ಟೀಮ್‍ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗ ಕೋವಿಡ್-19 ಪಾಸಿಟಿವ್ ಬಂದಿದೆ. ಪ್ರಸ್ತುತ ಅವರನ್ನು ತಂಡ ಉಳಿದುಕೊಂಡಿರುವ ಹೋಟೆಲ್‍ನಲ್ಲೇ ಐಸೊಲೇಶನ್‍ನಲ್ಲಿ ಇಡಲಾಗಿದೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಭಾರತ ತಂಡದ ಭಾಗವಾಗಿರುವ ರೋಹಿತ್ ಶರ್ಮಾ ಅಭ್ಯಾಸ ಪಂದ್ಯದ ವೇಳೆ ಮೂರನೇ ದಿನ ಏಳು ವಿಕಟ್ ಕಳೆದುಕೊಂಡ ಬಳಿಕ ಕೂಡ ಬ್ಯಾಟಿಂಗ್ ನಡೆಸಲು ಕ್ರೀಸ್‍ಗೆ ಆಗಮಿಸಿಲ್ಲ. ಭಾರತ ಮೂರನೇ ದಿನದ ಕೊನೆಯ ವೇಳೆಗೆ ಏಳು ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು