varthabharthi


ಬೆಂಗಳೂರು

ವಿವಿಧ ಪ್ರಕರಣದಡಿ 2,262 ಆರೋಪಿಗಳ ಬಂಧನ

ಬೆಂಗಳೂರು: 55 ಕೋಟಿ ರೂ.ಮೌಲ್ಯದ 2005 ಕೆಜಿ ಮಾದಕ ವಸ್ತು ಜಪ್ತಿ

ವಾರ್ತಾ ಭಾರತಿ : 26 Jun, 2022

ಬೆಂಗಳೂರು, ಜೂ.26: ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು 55 ಕೋಟಿ ಮೌಲ್ಯದ 2005 ಕೆಜಿ ಯಷ್ಟು ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ವಶಕ್ಕೆ ಪಡೆದಿರುವ ಮಾದಕ ವಸ್ತುಗಳ ನಾಶಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2021ನೇ ಸಾಲಿನಲ್ಲಿ ಒಟ್ಟು 4555 ಪ್ರಕರಣಗಳನ್ನು ದಾಖಲಿಸಿ 5753 ಆರೋಪಿಗಳನ್ನು ಬಂಧಿಸಿಲಾಗಿದೆ. ಈ ಪೈಕಿ 141 ಮಂದಿ ವಿದೇಶಿಯರಿದ್ದಾರೆ.ಇನ್ನೂ, 2022ನೆ ಸಾಲಿನಲ್ಲಿ ಒಟ್ಟು 1716 ಪ್ರಕರಣಗಳಲ್ಲಿ 2,262 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟಾರೆ, 55 ಕೋಟಿ ರೂ. ಮೌಲ್ಯದ 2005 ಕೆಜಿಯಷ್ಟು ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)