varthabharthi


ಮಾಹಿತಿ - ಮಾರ್ಗದರ್ಶನ

ಎಂಎಸ್‌ಎಂಇ ಬೆಳವಣಿಗೆಗಳು ಮತ್ತು ಸವಾಲುಗಳು

ಜೂ. 27ರಂದು ವಿಶ್ವ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ, ಮಧ್ಯಮ ಉದ್ದಿಮೆ) ದಿನ

ವಾರ್ತಾ ಭಾರತಿ : 26 Jun, 2022
ಸಿಎ ನರಸಿಂಹ ನಾಯಕ್

ಸಿಎ ನರಸಿಂಹ ನಾಯಕ್

ಉಡುಪಿ : ವಿಶ್ವ ಎಂಎಸ್‌ಎಂಇ ದಿನವನ್ನು ಜೂನ್ 27ರಂದು ಆಚರಿಸಲಾಗುತ್ತಿದೆ. ಭಾರತೀಯ ಎಂಎಸ್‌ಎಂಇ ವಲಯ ರಾಷ್ಟ್ರೀಯ ಆರ್ಥಿಕ ರಚನೆಯ ಬೆನ್ನೆಲುಬಾಗಿದೆ ಮತ್ತು ಜಾಗತಿಕ ಆರ್ಥಿಕ ಆಘಾತಗಳು ಮತ್ತು ಪ್ರತಿಕೂಲಗಳನ್ನು ನಿವಾರಿಸಲು ಇದು ಸ್ಥಿತಿ ಸ್ಥಾಪಕತ್ವವನ್ನು ಒದಗಿಸುವ ಮೂಲಕ ಭಾರತೀಯ ಆರ್ಥಿಕತೆಯ ಭದ್ರಕೋಟೆಯಾಗಿ ಅವಿರತವಾಗಿ ಕಾರ್ಯ ನಿರ್ವಹಿಸಿದೆ. 

ದೇಶದ ಭೌಗೋಳಿಕ ವಿಸ್ತಾರದಲ್ಲಿ ಸುಮಾರು ೬೩.೪ ಮಿಲಿಯನ್ ಘಟಕ ಗಳೊಂದಿಗೆ, ಎಂಎಸ್‌ಎಂಇಗಳು ಉತ್ಪಾದನಾ ಜಿಡಿಪಿಯ ಸುಮಾರು ಶೇ.೬.೧೧ ಮತ್ತು ಸೇವಾ ಚಟುವಟಿಕೆಗಳಿಂದ ಜಿಡಿಪಿಯ ಶೇ.೨೪.೬೩ ಮತ್ತು ಭಾರತದ ಉತ್ಪಾದನಾ ವಲಯಕ್ಕೆ ಶೇ.೩೩.೪ರಷ್ಟು ಕೊಡುಗೆ ನೀಡುತ್ತಿವೆ. ಇದು ದೇಶದ  ಸುಮಾರು ೧೨೦ ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸಲು ಸಮರ್ಥ ವಾಗಿವೆ. ಅಲ್ಲದೇ ಭಾರತದಿಂದ ಒಟ್ಟಾರೆ ರಫ್ತಿನ ಶೇ.೪೫ರಷ್ಟು ಕೊಡುಗೆ ನೀಡುತ್ತಿದೆ. ವಲಯವು ಸತತವಾಗಿ ಶೇ.೧೦ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ. ಸುಮಾರು ಶೇ.೨೦ ಎಂಎಸ್‌ಎಂಇ ಗ್ರಾಮೀಣ ಪ್ರದೇಶ ಗಳಿಂದ ಹೊರಗಿವೆ. ಇದು ವಲಯದಲ್ಲಿ ಗಮನಾರ್ಹವಾದ ಗ್ರಾಮೀಣ ಉದ್ಯೋಗಿಗಳ ನಿಯೋಜನೆಯನ್ನು ಸೂಚಿಸುತ್ತದೆ ಮತ್ತು ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮತ್ತು ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುವಲ್ಲಿ ಈ ಉದ್ಯಮಗಳ ಪ್ರಾಮುಖ್ಯತೆಯ ನಿದರ್ಶನವಾಗಿದೆ. 

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಗಳು), ಕೈಗಾರಿಕೆಗಳು, ಕಾರ್ಮಿಕರು, ಮಧ್ಯಮ ವರ್ಗ ಮತ್ತು ಇತರರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಆತ್ಮನಿಭರ್ರ ಭಾರತ್ ಅಭಿಯಾನ (ಎಬಿಎ) ಅಡಿಯಲ್ಲಿ ಕೇಂದ್ರ ಸರ್ಕಾರವು ೨೦ ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಘೋಷಿಸಿದೆ.

ಎಂಎಸ್‌ಎಂಇ ಹೊಸ ವ್ಯಾಖ್ಯಾನ (2020)
ಅತಿ ಸಣ್ಣ ಕೈಗಾರಿಕೆ: ಒಂದು ಕೋಟಿ ರೂಪಾಯಿವರೆಗಿನ ಹೂಡಿಕೆ ಮತ್ತು 5 ಕೋಟಿ ರೂಪಾಯಿವರೆಗಿನ ವಹಿವಾಟು ಹೊಂದಿರುವ ಕಂಪನಿ

ಸಣ್ಣ ಕೈಗಾರಿಕೆ: ೧೦ ಕೋಟಿ ರೂಪಾಯಿವರೆಗಿನ ಹೂಡಿಕೆ ಹಾಗೂ ೫೦ ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಕಂಪನಿ

ಮದ್ಯಮ ಕೈಗಾರಿಕೆ: ೨೦ ಕೋಟಿ ರೂಪಾಯಿವರೆಗಿನ ಹೂಡಿಕೆ ಹಾಗೂ ೨೦೦ ಕೋಟಿ ರೂಪಾಯಿವರೆಗಿನ ವಹಿವಾಟನ್ನು ಹೊಂದಿರುವ ಕಂಪನಿ. ವಹಿವಾಟು ಮತ್ತು ಹೂಡಿಕೆಯ ಮಾನದಂಡಗಳು ಸಂಯೋಜಿತವಾಗಿವೆ.

ಉದ್ಯಮ ನೋಂದಣಿ ಮತ್ತುನವೀಕರಣ: ಎಲ್ಲಾ ಪ್ರಸ್ತುತ ಉದ್ಯೋಗ್ ಆಧಾರ್ ನೋಂದಾಯಿಸಿದ ಘಟಕಗಳು ಉದ್ಯಮ್ ಆಧಾರ್ ಎಂಎಸ್‌ಎಂಇ ಪೋರ್ಟಲ್ (https://udyamregistration.gov.in) ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ೧ನೇ ಏಪ್ರಿಲ್ ೨೦೨೧ರಿಂದ, ಉದ್ಯಮ್ ನೋಂದಣಿ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿ ಅಥವಾ ಉದ್ಯಮವು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹೊಸ ಉದ್ಯಮ್ ನೋಂದಣಿ ಪೋರ್ಟಲ್ ನಲ್ಲಿ ಆನ್‌ಲೈನ್‌ನಲ್ಲಿ  ತನ್ನ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಅಂತಹ ಉದ್ಯಮ ಅಥವಾ ವ್ಯಕ್ತಿಯು ತಮ್ಮ ಆದಾಯ ತೆರಿಗೆ ರಿಟರ್ನ್ ಮತ್ತು ಹಿಂದಿನ ಹಣಕಾಸು ವರ್ಷದ ಜಿಎಸ್‌ಟಿ ರಿಟರ್ನ್ ವಿವರಗಳನ್ನು ಮತ್ತು ಸ್ವಯಂ ಘೋಷಣೆಯ ಆಧಾರದ ಮೇಲೆ ಅಗತ್ಯವಿರುವ ಇತರ ಹೆಚ್ಚುವರಿ ಮಾಹಿತಿಯನ್ನು ನವೀಕರಿಸಬೇಕಾಗುತ್ತದೆ. 

ಸರ್ಕಾರದ ನೀತಿ ಎಂಎಸ್‌ಎಂಇ ವಲಯವನ್ನು ಹೇಗೆ ಸುಧಾರಿಸಬಹುದು

*ವಲಯದೊಳಗೆ ಡಿಜಿಟಲ್ ಅಳವಡಿಕೆಗೆ ಉತ್ತೇಜನ ನೀಡುವುದು.
*ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು.
*ಕೌಶಲ್ಯದ ಸವಾಲುಗಳನ್ನು ಪರಿಹರಿಸುವುದು.
*ಜಿಎಸ್ಟಿ ಅನುಸರಣೆ ಸರಳವಾಗಿಸುವುದು
*ಏಕ ಗವಾಕ್ಷಿ ತೆರವು ಸೌಲಭ್ಯದ ಮೂಲಕ ಎಲ್ಲಾ ವಿವಿಧ ಪರವಾನಗಿ ಮತ್ತು ಅನುಸರಣೆ ನಿಯಮಾವಳಿಗಳನ್ನು ಸರಾಗಗೊಳಿಸುವುದು
*ಇ-ಕಾಮರ್ಸ್ ಮೂಲಕ ವಲಯವನ್ನು ವಿಶಾಲ ಮಾರುಕಟ್ಟೆಗಳಿಗೆ ಮಾರ್ಗದರ್ಶನ ಮಾಡುವ ಮಧ್ಯಸ್ಥಿಕೆಗಳನ್ನು ಮಾಡುವುದು
*ಪರಿಣಾಮಕಾರಿ ನಿಧಿಯ ಮೂಲಕ ಹಣಕಾಸಿನ ನೆರವು. *ಉತ್ತಮ ಮಾರುಕಟ್ಟೆ ಯೋಜನೆಗಳನ್ನುಒದಗಿಸುವುದು

-ಸಿಎ ನರಸಿಂಹ ನಾಯಕ್
ಮಾಜಿ ಅಧ್ಯಕ್ಷರು ಭಾರತೀಯ ಲೆಕ್ಕಪರಿಶೋಧನ ಸಂಸ್ಥೆ ಉಡುಪಿ ಶಾಖೆ. 
ದಕ್ಷಿಣ ಭಾರತದ ಪ್ರಾದೇಶಿಕ ಲೆಕ್ಕಪರಿಶೋಧನ ಸಂಸ್ಥೆಯ ನಾಮ ನಿರ್ದೇಶಿತ ಸದಸ್ಯರು ಎಂಎಸ್‌ಎಂಇ ಮತ್ತು ಸ್ಟಾರ್ಟಪ್ ಸಮಿತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)