varthabharthi


ಕರ್ನಾಟಕ

ಕೆ.ಆರ್.ಪೇಟೆ: ದೇಗುಲದ ಆವರಣದಲ್ಲೇ ರೌಡಿಶೀಟರ್ ಹತ್ಯೆ

ವಾರ್ತಾ ಭಾರತಿ : 27 Jun, 2022

( ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೋಲೀಸರು)

ಕೆ.ಆರ್.ಪೇಟೆ: ದೇಗುಲದ ಆವರಣದಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ನಡೆಸಿರುವ ಘಟನೆ ಸೋಮವಾರ ನಡೆದಿದೆ. 

ಅರುಣ್ ಕೊಲೆಗೀಡಾದ ಯುವಕನಾಗಿದ್ದು, ಕೆ.ಆರ್.ಪೇಟೆ ಪಟ್ಟಣದ ಈಶ್ವರ ದೇವಾಲಯದ ಬಳಿ ಘಟನೆ ನಡೆದಿದೆ. 

ಅರುಣ್ ಈ ಹಿಂದೆ ಕೊಲೆ, ಅಪಹರಣ, ಕೊಲೆ ಬೆದರಿಕೆ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ.

ಹಳೆ ವೈಷಮ್ಯದಿಂದ ಬೈಕ್ ನಲ್ಲಿ‌ ಬಂದ ಏಳೆಂಟು ಮಂದಿ ಯುವಕರ ಗುಂಪು ಮಚ್ಚು ಲಾಂಗುಗಳಿಂದ ಕೊಚ್ಚಿ ಬರ್ಬರ ಹತ್ಯೆ ನಡೆಸಿದೆ ಎಂದು ಹೇಳಲಾಗಿದೆ. 

ಹಾಡಹಗಲೆ ನಡೆದ ಬೀಕರ ಹತ್ಯೆಯಿಂದ ಕೆ.ಆರ್.ಪೇಟೆ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಸ್ಥಳಕ್ಕೆ ಕೆ.ಆರ್.ಪೇಟೆ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)