varthabharthi


ರಾಷ್ಟ್ರೀಯ

ಒಎನ್ ಜಿಸಿ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ‌ ಲ್ಯಾಂಡಿಂಗ್: ಆರು ಜನರ ರಕ್ಷಣೆ

ವಾರ್ತಾ ಭಾರತಿ : 28 Jun, 2022

 ಸಾಂದರ್ಭಿಕ ಚಿತ್ರ,Photo: PTI

ಹೊಸದಿಲ್ಲಿ: ಏಳು ಪ್ರಯಾಣಿಕರು ಹಾಗೂ  ಇಬ್ಬರು ಪೈಲಟ್‌ಗಳನ್ನು ಹೊತ್ತ ಹೆಲಿಕಾಪ್ಟರ್ ಮಂಗಳವಾರ  ಮುಂಬೈ ಹೈನಲ್ಲಿರುವ  ಸಾಗರ್ ಕಿರಣ್‌ನಲ್ಲಿರುವ ತೈಲ ಹಾಗೂ  ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ಒಎನ್‌ಜಿಸಿ) ರಿಗ್ ಬಳಿ ಅರಬ್ಬಿ ಸಮುದ್ರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.

ಇದುವರೆಗೆ ಆರು ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಂಪೆನಿ ಹೇಳಿದೆ.

ಹೆಲಿಕಾಪ್ಟರ್ ನಲ್ಲಿ ಒಎನ್‌ಜಿಸಿಯ ಆರು ಮಂದಿ ಹಾಗೂ  ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರ ಪ್ರಯಾಣಿಸುತ್ತಿದ್ದರು.

ತುರ್ತು ಲ್ಯಾಂಡಿಂಗ್‌ಗೆ ಕಾರಣವಾದ ಸಂದರ್ಭಗಳು ತಕ್ಷಣವೇ ಸ್ಪಷ್ಟವಾಗಿಲ್ಲ. ಇತರ ವಿವರಗಳನ್ನು ನಿರೀಕ್ಷಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)