varthabharthi


ಉಡುಪಿ

25 ಸಮುದಾಯ ಭವನಗಳ ಅಭಿವೃದ್ಧಿಗೆ 5 ಕೋಟಿ ರೂ.

ಕಾರ್ಕಳ ಕ್ಷೇತ್ರದ ವಿವಿಧ ಸಮುದಾಯ ಭವನಗಳ ಅಭಿವೃದ್ಧಿಗೆ ಚೆಕ್‌ ಹಸ್ತಾಂತರ

ವಾರ್ತಾ ಭಾರತಿ : 28 Jun, 2022

ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರದ ವಿವಿಧ ಸಮುದಾಯ ಭವನಗಳ ಅಭಿವೃದ್ಧಿಗಾಗಿ ಸರಕಾರದಿಂದ ಮಂಜೂರಾದ ಅನುದಾನದ ಚೆಕ್‌ ಅನ್ನು ಸಚಿವರ ಕಚೇರಿ ವಿಕಾಸದಲ್ಲಿ ವಿತರಿಸಲಾಯಿತು. ಸಚಿವ ವಿ. ಸುನೀಲ್‌ ಕುಮಾರ್‌ ಅವರು ಮಂಗಳವಾರ 10 ಸಮುದಾಯದ ಪ್ರಮುಖರಿಗೆ ಚೆಕ್‌ ಹಸ್ತಾಂತರಿಸಿದರು. ಕ್ಷೇತ್ರದ 25 ಸಮುದಾಯ ಭವನಗಳ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರುಗೊಂಡಿದ್ದು, ನಿರ್ಮಿತಿ ಕೇಂದ್ರ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. 

ಬಿಲ್ಲವ ಸಮಾಜದ ನಕ್ರೆ ಕುಕ್ಕುಂದೂರು, ಮುನಿಯಾಲು, ಹೆಬ್ರಿ, ಬೈಲೂರು, ಬಜಗೋಳಿ, ಈದು ಗ್ರಾಮದ ನಾರಾಯಣಗುರು
ಸಮುದಾಯ ಭವನ, ಆನೆಕೆರೆ ಶ್ರೀಕೃಷ್ಣ ಸಮುದಾಯ ಭವನ, ವಿಶ್ವಕರ್ಮ ಸಮಾಜದ ನಿಂಜೂರು, ಕಾರ್ಕಳ, ಬೈಲೂರು ಸಮುದಾಯದ ಮುಖಂಡರಿಗೆ ಮಂಗಳವಾರ ಚೆಕ್‌ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಎಲ್ಲ ಸಮುದಾಯ ಭವನದ ಮುಖ್ಯಸ್ಥರು ಉಪಸ್ಥಿತರಿದ್ದರು. ರವೀಂದ್ರ ಕುಮಾರ್‌ ಕುಕ್ಕುಂದೂರು ಕಾರ್ಯಕ್ರಮ ನಿರ್ವಹಿಸಿದರು. 

ವಿವಿಧ ಸಮುದಾಯ ಭವನಗಳಿಗೆ ಅನುದಾನ 
ಮುಂಡ್ಕೂರು ಗ್ರಾಮದ ಸಫಳಿಗ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 15 ಲಕ್ಷ ರೂ., ಸಚ್ಚರಿಪೇಟೆ ಜಿಎಸ್‌ಬಿ ಸಮಾಜ ಸೇವಾ ಸಂಘ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ ರೂ., ನಾನಿಲ್ತಾರ್‌ ಕುಲಾಲ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ., ಕುಕ್ಕುಂದೂರು ಬಿಲ್ಲವ ಸಮಾಜ ಸೇವಾ ಸಮಿತಿ ನಕ್ರೆ 20 ಲಕ್ಷ ರೂ., ಅಂಡಾರು ಕರಿಯಾಲು ಶ್ರೀ ವಿಠಲ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನಕ್ಕೆ 25 ಲಕ್ಷ ರೂ., ಶಿವಪುರ ಕಜಾನೆ ಕೊಡಮಣಿತ್ತಾಯ ಸಮುದಾಯ ಭವನಕ್ಕೆ 20 ಲಕ್ಷ ರೂ., ಹೆಬ್ರಿ ಬಿಲ್ಲವ ಸಮುದಾಯ ಭವನಕ್ಕೆ 25 ಲಕ್ಷ ರೂ., ಬೈಲೂರು ಬಿಲ್ಲವ ಸಂಘ ಸಮುದಾಯ ಭವನ 25 ಲಕ್ಷ ರೂ., ಬಜಗೋಳಿ ಬಿಲ್ಲವ ಸಮುದಾಯ ಭವನ 20 ಲಕ್ಷ ರೂ., ನಿಂಜೂರು ವಿಶ್ವಕರ್ಮ ಸಮುದಾಯ ಭವನಕ್ಕೆ 20 ಲಕ್ಷ ರೂ., ಜೋಡುರಸ್ತೆ ಕುಕ್ಕುಂದೂರು ಕುಲಾಲ ಸುಧಾರಕ ಸಂಘದ ಸಮುದಾಯ ಭವನಕ್ಕೆ 25 ಲಕ್ಷ ರೂ., ವರಂಗ ಶ್ರೀ ದೇವಿಮರುಳ ಚಿಕ್ಕಮ್ಮ ಇದರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ., ಚಾರ ಗ್ರಾಮದ ಗಾಂಧಿನಗರ ನಾಗಬ್ರಹ್ಮ ದೇವಸ್ಥಾನ ಮರಾಠಿ ಸಮುದಾಯ ಭವನಕ್ಕೆ 15 ಲಕ್ಷ ರೂ., ಹೆಬ್ರಿ ಗ್ರಾಮದ ಹೆಬ್ಬಾರಬೆಟ್ಟು ಪರಿಶಿಷ್ಟ ಪಂಗಡದ ಸಮುದಾಯ ಭವನಕ್ಕೆ 15 ಲಕ್ಷ ರೂ., ಹೆಬ್ರಿ ಗ್ರಾಮದ ಹೆಬ್ಬಾರಬೆಟ್ಟು ಪರಿಶಿಷ್ಟ ಪಂಗಡದ ಕಾಲನಿಯ ಸಮುದಾಯ ಭವನಕ್ಕೆ 15 ಲಕ್ಷ ರೂ., ಬೆಳಂಜೆ ಸುಭಾಷ್‌ ನಗರ ಪರಿಶಿಷ್ಟ ಜಾತಿ ಕಾಲನಿ ಸಮುದಾಯ ಭವನಕ್ಕೆ 15 ಲಕ್ಷ ರೂ., ನಿಟ್ಟೆ ಗ್ರಾಮದ ಚೇತನಹಳ್ಳಿ ಸಮುದಾಯ ಮಂದಿರ ಬಳಿಯ ಪರಿಶಿಷ್ಟ ಜಾತಿಯ ಸಮುದಾಯ ಭವನಕ್ಕೆ 15 ಲಕ್ಷ ರೂ., ಸಾಣೂರು ಗ್ರಾಮದ ಪಡ್ಡಾಯಿಗುಡ್ಡೆ ಸತ್ಯಸಾರಾಮಣಿ ದೈವಸ್ಥಾನ ಸಮುದಾಯ ಭವನಕ್ಕೆ 15 ಲಕ್ಷ ರೂ., ಮಿಯ್ಯಾರು ಗ್ರಾಮದ ಪೊಸರುಗುಡ್ಡೆ ಸತ್ಯಸಾರಾಮಣಿ ದೈವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ., ಕಾರ್ಕಳ ಆನೆಕೆರೆ ಶ್ರೀ ಕೃಷ್ಣ ಸಮುದಾಯ ಭವನಕ್ಕೆ 25 ಲಕ್ಷ ರೂ., ಕಾರ್ಕಳ ವಿಶ್ವಕರ್ಮ ಸಮುದಾಯ ಭವನಕ್ಕೆ 20 ಲಕ್ಷ ರೂ., ಬೈಲೂರು ವಿಶ್ವಕರ್ಮ ಸಮುದಾಯ ಭವನಕ್ಕೆ 25 ಲಕ್ಷ ರೂ., ಮುನಿಯಾಲು ಬಿಲ್ಲವ ಸಮುದಾಯ ಭವನಕ್ಕೆ 25 ಲಕ್ಷ ರೂ., ಈದು ಗ್ರಾಮದ ನಾರಾಯಣಗುರು ಸಮುದಾಯ ಭವನಕ್ಕೆ 25 ಲಕ್ಷ ರೂ., ಹೆಬ್ರಿ ಬಚ್ಚಪ್ಪು ಅಯ್ಯಪ್ಪ ಮಂದಿರದ ಸಭಾಭವನಕ್ಕೆ 20 ಲಕ್ಷ ರೂ., ಮಿಯ್ಯಾರು ಗ್ರಾಮದ ಬಂಟರ ಸಮುದಾಯ ಭವನಕ್ಕೆ 30 ಲಕ್ಷ ರೂ., ಬಿಲ್ಲವ ಸಮಾಜ ಸೇವಾ ಸಮಿತಿ ನಕ್ರೆ ಕುಕ್ಕುಂದೂರು 20 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)