varthabharthi


ರಾಷ್ಟ್ರೀಯ

ಇಮಾಂ ಅಲಿಯವರ ಉಪದೇಶವನ್ನು ಟ್ವೀಟ್‌ ಮಾಡಿದ ಶಿವಸೇನೆಯ ಸಂಜಯ್‌ ರಾವುತ್‌

ವಾರ್ತಾ ಭಾರತಿ : 28 Jun, 2022

ಹೊಸದಿಲ್ಲಿ: ಮಹಾರಾಷ್ಟ್ರದ ರಾಜಕೀಯ ಕ್ಷೇತ್ರದಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿದ್ದು, ಸರಕಾರ ಬೀಳಿಸುವ ಪ್ರಯತ್ನನಗಳು ನಡೆಯುತ್ತಿವೆ. ಶಿವಸೇನೆ ಮುಖಂಡ ಸಂಜಯ್‌ ರಾವುತ್‌ರವರಿಗೆ ಈ ಬೆಳವಣಿಗೆಗಳ ಮಧ್ಯೆಯೂ ಇಡಿ ಸಮನ್ಸ್‌ ಹೊರಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಂಜಯ್‌ ರಾವುತ್‌ ಇಸ್ಲಾಂ ಧರ್ಮದ ಪ್ರಮುಖರಾದ ಇಮಾಂ ಅಲಿಯವರ ಹೇಳಿಕೆಯೊಂದನ್ನು ಶೇರ್‌ ಮಾಡಿದ್ದಾರೆ. 

ಮೂರ್ಖತನಕ್ಕೆ ಸಂಬಂಧಪಟ್ಟ ಹೇಳಿಕೆಯನ್ನು ಅವರು ಟ್ವೀಟ್‌ ಮಾಡಿದ್ದಾರೆ. "ಜಹಾಲತ್‌ ಏಕ್‌ ಖಿಸ್ಮ್‌ ಕಿ ಮೌತ್‌ ಹೇ, ಔರ್‌ ಜಾಹಿಲ್‌ ಲೋಗ್‌ ಚಲ್ತಿ ಫಿರ್ತಿ ಲಾಶೈನ್‌ ಹೇ (ಮೂರ್ಖತನ ಒಂದು ರೀತಿಯ ಸಾವು. ಮೂರ್ಖರು ನಡೆದಾಡುವ ಶವಗಳು) ಎಂಬ ಹೇಳಿಕೆಯನ್ನು ತಮ್ಮ ಅಧಿಕೃತ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.

ಇಮಾಂ ಅಲಿಯವರು ಇಸ್ಲಾಂ ಧರ್ಮದ ಪ್ರಮುಖ ನಾಲ್ಕು ಖಲೀಫರಲ್ಲಿ ಕೊನೆಯವರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)