varthabharthi


ಉಡುಪಿ

‘ಇಂಚರ’ ಕಾಪು ತಾಲೂಕು ಅಧ್ಯಕ್ಷರಾಗಿ ಗೀತಾ ವಾಗ್ಲೆ

ವಾರ್ತಾ ಭಾರತಿ : 29 Jun, 2022

ಶಿರ್ವ: ಕಾಪು ತಾಲೂಕಿನ  ಸಂಜೀವಿನಿ ಒಕ್ಕೂಟಗಳನ್ನು ಒಳಗೊಂಡ  ಇಂಚರ ಕಾಪು ತಾಲೂಕು ಸಂಜೀವಿನಿ ಒಕ್ಕೂಟಗಳ ಪ್ರಥಮ ಅಧ್ಯಕ್ಷೆಯಾಗಿ ಸಾಮಾಜಿಕ ಕಾರ್ಯರ್ತೆ ಬಂಟಕಲ್ಲು ಗೀತಾ ವಾಗ್ಲೆ ಅಯ್ಕೆಯಾಗಿದ್ದಾರೆ.

ಇತ್ತೀಚೆಗೆ ಕಾಪು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿದ  ಸಭೆ ಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಾಜಿ ತಾಪಂ ಸದಸ್ಯೆ ಯಾಗಿರುವ ಇವರು, ಶಿರ್ವ ಗ್ರಾಮದ ಶೃಂಗಾರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ, ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ಅಧ್ಯಕ್ಷೆಯಾಗಿದ್ದಾರೆ.  ಪಡುಬೆಳ್ಳೆ ಶ್ರೀನಾರಾಯಣಗುರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯೆ ಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)