varthabharthi


ರಾಷ್ಟ್ರೀಯ

ಬಿಜೆಪಿ ಸದಸ್ಯರೊಂದಿಗೆ ಉದಯಪುರ ಹತ್ಯೆ ಆರೋಪಿಗೆ ಸಂಬಂಧ: ಇಂಡಿಯಾ ಟುಡೆ ತನಿಖಾ ವರದಿ

ವಾರ್ತಾ ಭಾರತಿ : 2 Jul, 2022

ಉದಯಪುರ: ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಟೈಲರ್ ಹತ್ಯೆಯ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ Indiatoday.com ಮಾಡಿರುವ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ. 

ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಕಳೆದ ಹತ್ತು ವರ್ಷಗಳಿಂದ ಇರುವ ಸದಸ್ಯ ಇರ್ಷಾದ್‌ ಚೈನ್‌ವಾಲ ಆರೋಪಿಗಳಲ್ಲಿ ಓರ್ವನಾದ ರಿಯಾಝ್‌ ಜೊತೆ ಕಾಣಿಸಿಕೊಂಡಿರುವ ಹಲವು ಚಿತ್ರಗಳನ್ನು ಇಂಡಿಯಾಟುಡೆ ವರದಿ ಮಾಡಿದೆ. 

ಈ ಕುರಿತು ಇರ್ಷಾದ್‌ ಬಳಿ ಕೇಳಿದಾಗ, ಬಿಜೆಪಿ ನಾಯಕ ಗುಲಾಬ್‌ ಚಂದ್‌ ಕಟಾರಿಯಾ ಅವರ ಹಲವು ಕಾರ್ಯಕ್ರಮಗಳಲ್ಲಿ ಹತ್ಯೆಯ ಆರೋಪಿ ಭಾಗಿಯಾಗಿದ್ದ, ಆತ ಬಿಜೆಪಿ ಸೇರಲು ಉತ್ಸುಕನಾಗಿದ್ದೇನೆ ಎಂದು ಹೇಳುತ್ತಿದ್ದ. ಆದರೆ ವೈಯಕ್ತಿಕವಾಗಿ ಬಿಜೆಪಿ ನೀತಿಯನ್ನು ಟೀಕಿಸುತ್ತಿದ್ದ ಎಂದು ಹೇಳಿದ್ದಾರೆ.

ಅದೂ ಅಲ್ಲದೆ, ಬಿಜೆಪಿಯ ಇನ್ನೋರ್ವ ಕಾರ್ಯಕರ್ತ ಮಹಮ್ಮದ್‌ ತಾಹಿರ್‌ ಎಂಬಾತನೊಂದಿಗೆ ರಿಯಾಝ್‌ ಇರುವ ಚಿತ್ರಗಳನ್ನೂ ಇಂಡಿಯಾ ಟುಡೆ ಹೊರಗೆಡವಿದೆ. ಇಂಡಿಯಾ ಟುಡೆ ವರದಿ ಪ್ರಕಾರ ತಾಹಿರ್‌ ಜೊತೆಗೆ ಉದಯಪುರದ ಬಿಜೆಪಿ ಕಾರ್ಯಕ್ರಮದಲ್ಲಿ ರಿಯಾಝ್‌ ಭಾಗಿಯಾಗಿದ್ದ. ಇರ್ಷಾದ್‌ ನೀಡಿರುವ ಹೇಳಿಕೆ ಪ್ರಕಾರ ರಿಯಾಝ್‌ ಹಾಗೂ ತಾಹೀರ್‌ ಆಪ್ತರಾಗಿದ್ದು, ಕೊಲೆಯ ಬಳಿಕ ತಾಹಿರ್‌ ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾಟುಡೆ ವರದಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)