ಬೆಂಗಳೂರು: ಒಂದೇ ದಿನ ಬರೋಬ್ಬರಿ 3 ಸಾವಿರ ಪೊಲೀಸರ ವರ್ಗಾವಣೆ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಜು.2: ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಒಂದು ದಿನದಲ್ಲಿ ಪೊಲೀಸ್ ಇಲಾಖೆಯ 3 ಸಾವಿರ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ದಾಖಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆಯಾಗಿದ್ದು, ಅದರಲ್ಲೂ ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಪೈಕಿ ಒಟ್ಟು 1,749 ಕಾನ್ಸ್ಟೇಬಲ್, 1,292 ಹೆಡ್ಕಾನ್ಸ್ಟೇಬಲ್, 43 ಎಎಸ್ಸೈ ಹಾಗೂ 163 ಪಿಎಸ್ಸೈಗಳಿದ್ದಾರೆ ಎಂದು ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
Next Story