varthabharthi


ಉಡುಪಿ

ಶಂಕರನಾರಾಯಣ; ಪಿಡಬ್ಲ್ಯುಡಿ ಗುತ್ತಿಗೆದಾರನಿಗೆ ಲಕ್ಷಾಂತರ ರೂ. ವಂಚನೆ

ವಾರ್ತಾ ಭಾರತಿ : 2 Jul, 2022

ಶಂಕರನಾರಾಯಣ: ಪ್ರೊಜೆಕ್ಟ್ ಕಾಮಗಾರಿ ನೀಡುವುದಾಗಿ ನಂಬಿಸಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ  ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಜಕೂರು ಶ್ರೀರಾಮಪುರದ ಚಂದ್ರಪ್ಪ (50) ಎಂಬಾತ ಭದ್ರಾ ಪವರ್ ಪ್ರೊಜೆಕ್ಟ್ ಹಾಗೂ ಕಾರ್ಗಲ್ ಪ್ರೊಜೆಕ್ಟ್  43 ಲಕ್ಷ ರೂ.ಗೆ  ಗುತ್ತಿಗೆ ವಹಿಸಿಕೊಂಡುವುದಾಗಿ ಹೇಳಿ ಪಿಡಬ್ಲ್ಯುಡಿ ಗುತ್ತಿಗೆದಾರ ಶಂಕರನಾರಾಯಣದ ಸಂತೋಷ ಕುಮಾರ್ ಶೆಟ್ಟಿ ಎಂಬವರನ್ನು ನಂಬಿಸಿ ೧೮,೫೦,೦೦೦ರೂ. ನೀಡುವಂತೆ ತಿಳಿಸಿದ್ದನು. ಅದನ್ನು  ನಂಬಿದ ಸಂತೋಷ್ ಕುಮಾರ್, ಚಂದ್ರಪ್ಪ ಖಾತೆಗೆ ೧೮,೫೦,೦೦೦ರೂ. ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ.

ಆ ಬಳಿಕ ಚಂದ್ರಪ್ಪ ಸುಳ್ಳು ಹೇಳಿ ಗುತ್ತಿಗೆಯನ್ನು ವಹಿಸಿಕೊಳ್ಳದೆ ೧,೦೦,೦೦೦ ರೂ. ಹಣವನ್ನು ಸಂತೋಷ್ ಕುಮಾರ್ ಶೆಟ್ಟಿಗೆ ವಾಪಾಸು ನೀಡಿ ಉಳಿದ  ೧೭,೫೦,೦೦೦ರೂ. ಹಣವನ್ನು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)