varthabharthi


ನಿಧನ

ಕೆ.ಶಾರದ

ವಾರ್ತಾ ಭಾರತಿ : 1 Aug, 2022

ಕುಂದಾಪುರ : ಕುಂದಾಪುರ ಬೀಡಿ ಕೆಲಸಗಾರರ ಸಂಘದ ಮುಂದಾಳು ಕೆ.ಶಾರದ (79)ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

೧೯೮೫ರ ಸುಮಾರಿಗೆ ಬೀಡಿ ಕಾರ್ಮಿಕರ ಹೋರಾಟದ ಸಂದರ್ಭದಲ್ಲಿ ಸಂಘಕ್ಕೆ ಪರಿಚಯವಾಗಿ ಸೇರ್ಪಡೆಯಾದ ಶಾರದ, ಕುಂದಾಪುರ ಬೀಡಿ ಕೆಲಸ ಗಾರರ ಸಂಘದ ಅಧ್ಯಕ್ಷರಾಗಿ ಹಲವಾರು ವರ್ಷ ಕೆಲಸ ನಿರ್ವಹಿಸಿದ್ದರು.

ಸಂಘದ ಪ್ರತಿನಿಧಿಯಾಗಿ ಸಿಐಟಿಯು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಇದರ ತಾಲೂಕು ಸಮಿತಿ ಸದಸ್ಯರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ೧೯೮೭ರಲ್ಲಿ ಮದ್ದುಗುಡ್ಡೆ ಪಕ್ಷದ ಶಾಖೆ ಹುಟ್ಟುಹಾಕಿ ಆ ಶಾಖೆಯ ಕಾರ್ಯದರ್ಶಿಯೂ ಆಗಿ ಜವಾಬ್ದಾರಿ ನಿರ್ವಹಿಸಿದ್ದರು. ೨೦೦೧ರಲ್ಲಿ  ಕುಂದಾಪುರ ಪುರಸಭೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು. ೧೯೯೦ರಲ್ಲಿ ಪಕ್ಷದ ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆಯಾಗಿ ದೀರ್ಘ ಕಾಲ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಇವರು ಇಬ್ಬರು ಪುತ್ರರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರ ನಿಧಾನಕ್ಕೆ ಕುಂದಾಪುರ ಬೀಡಿ ಕೆಲಸಗಾರರ ಸಂಘ, ಸಿಐಟಿಯು ಕುಂದಾಪುರ ಸಂಚಾಲನ ಸಮಿತಿ ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಂತಾಪ ವ್ಯಕ್ತಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)