varthabharthi


ಕ್ರೀಡೆ

ಲಾನ್ ಬೌಲ್ಸ್: ಭಾರತದ ಮಹಿಳಾ ತಂಡಕ್ಕೆ ಐತಿಹಾಸಿಕ ಚಿನ್ನ

ವಾರ್ತಾ ಭಾರತಿ : 2 Aug, 2022

ಬರ್ಮಿಂಗ್‌ಹ್ಯಾಮ್, ಆ.2: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಂಗಳವಾರ ನಡೆದ ಲಾನ್‌ಬೌಲ್ಸ್ ಗೇಮ್ಸ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 17-10 ಅಂತರದಿಂದ ಮಣಿಸಿದ ಭಾರತದ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಭಾರತವು ಪ್ರಸಕ್ತ ಗೇಮ್ಸ್‌ನಲ್ಲಿ ಇಂದು ನಾಲ್ಕನೇ ಚಿನ್ನದ ಪದಕವನ್ನು ಜಯಿಸಿದೆ. ಈಗಾಗಲೇ ತಲಾ 3 ಚಿನ್ನ, ಬೆಳ್ಳಿ ಹಾಗೂ ಕಂಚು ಸಹಿತ 9 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಸೋಮವಾರ ನಡೆದ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 16-13 ಅಂತರದಿಂದ ಮಣಿಸಿದ್ದ ಭಾರತವು ಮಹಿಳೆಯರ ಫೋರ್ಸ್ ಮಾದರಿಯಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿತ್ತು.

ಮಹಿಳೆಯರ ಫೋರ್ಸ್ ತಂಡದಲ್ಲಿ ಲವ್ಲೀ ಚೌಬೆ, ಪಿಂಕಿ, ನಯನಮೋನಿ ಹಾಗೂ ರೂಪಾ ರಾಣಿ ಟರ್ಕಿ ಅವರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)