varthabharthi


ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್: ಕುಸ್ತಿಪಟು ನವೀನ್‌ಗೆ ಚಿನ್ನ

ವಾರ್ತಾ ಭಾರತಿ : 6 Aug, 2022

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶನಿವಾರ ನಡೆದ ಕುಸ್ತಿ ಸ್ಪರ್ಧೆಯ ಪುರುಷರ ಫ್ರೀಸ್ಟೈಲ್ 74 ಕೆಜಿ ವಿಭಾಗದ ಫೈನಲ್‌ನಲ್ಲಿ ನವೀನ್ ಪಾಕಿಸ್ತಾನದ ಮುಹಮ್ಮದ್ ಶರೀಫ್‌ರನ್ನು 9-0 ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಒಂದೇ ದಿನ ಕುಸ್ತಿಯಲ್ಲಿ ಭಾರತವು ಮೂರನೇ ಚಿನ್ನದ ಪದಕ ಗೆದ್ದುಕೊಂಡಿದೆ.

ಒಟ್ಟಾರೆ ಕುಸ್ತಿಯಲ್ಲಿ ಆರನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಶುಕ್ರವಾರ ಸತತ 3 ಚಿನ್ನ ಜಯಿಸಿದ್ದ ಭಾರತವು ಸತತ ಎರಡನೇ ದಿನವೂ ಹ್ಯಾಟ್ರಿಕ್ ಚಿನ್ನ ಜಯಿಸಿದೆ. ಕುಸ್ತಿಪಟುಗಳ ಸಾಹಸದಿಂದ ಭಾರತವು 12ನೇ ಚಿನ್ನ ಜಯಿಸಿದೆ. ನವೀನ್ ತಾನಾಡಿದ ಮೊದಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿ ಮಿಂಚಿದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)