ಬೆಂಗಳೂರು: ಅಪ್ರಾಪ್ತರಿಗೆ ಬಾರ್, ಪಬ್ ಪ್ರವೇಶ ನಿಷೇಧ
ಬೆಂಗಳೂರು, ಆ.10: ನಗರ ವ್ಯಾಪ್ತಿಯಲ್ಲಿರುವ ಮದ್ಯದಂಗಡಿ, ಪಬ್ಗಳಲ್ಲಿ ನಿಗದಿತ ಸಮಯದಲ್ಲಿ ಬಂದ್ ಮಾಡಬೇಕು. ಜತೆಗೆ, ಅಪ್ರಾಪ್ತರಿಗೆ ಪ್ರವೇಶ ನಿಷೇಧಿಸಬೇಕು ಎಂದು ನಗರ ಪೊಲೀಸರು ಸೂಚನೆ ನೀಡಿದ್ದಾರೆ.
ಈ ಕುರಿತು ಆದೇಶ ಹೊರಡಿಸಿದ್ದು, ಅಪ್ರಾಪ್ತರಿಗೆ ಪ್ರವೇಶ ನೀಡಿದ್ದ ಪಬ್ ಮತ್ತು ಮದ್ಯದಂಗಡಿ ಮಾಲಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಈ ಸಂಬಂಧ ಪೊಲೀಸರು ಪ್ರತಿನಿತ್ಯ ಎಲ್ಲ ಪಬ್ ಮತ್ತು ಮದ್ಯದಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಬೇಕೆಂದು ಹೇಳಲಾಗಿದೆ.
ಈಗಾಗಲೇ ನಿಯಮ ಉಲ್ಲಂಘಿಸಿದ ಕೇಂದ್ರವಿಭಾಗದ 9 ಪಬ್ ಅಂಡ್ ಬಾರ್ ಮೇಲೆ ಪ್ರಕರಣ ದಾಖಲಾಗಿದೆ. ಪಶ್ಚಿಮ ವಿಭಾಗದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಪೂರ್ವ ವಿಭಾಗದಲ್ಲಿ 79 ಪಬ್ ಮತ್ತು ಬಾರ್ಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಮಾಡಲಾಗಿದೆ. ಉತ್ತರವಿಭಾಗದಲ್ಲಿ ಒಟ್ಟು 3 ಪ್ರಕರಣ ದಾಖಲಾಗಿದೆ. ಅಗ್ನೇಯ ವಿಭಾಗದಲ್ಲಿ ನಿಯಮ ಉಲ್ಲಂಘಿಸಿದ 2 ಪಬ್ಮತ್ತು ಬಾರ್ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story