varthabharthi


ಬೆಂಗಳೂರು

ಚಾಮರಾಜಪೇಟೆ: ಉಪವಿಭಾಗಾಧಿಕಾರಿಯೇ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವಂತೆ ಆದೇಶ

ವಾರ್ತಾ ಭಾರತಿ : 12 Aug, 2022

ಬೆಂಗಳೂರು, ಆ.12: ಸ್ವಾತಂತ್ರ್ಯ ದಿನಾಚಾರಣೆಯ ಅಂಗವಾಗಿ ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರಕಾರವೇ ಧ್ಚಜಾರೋಹಣ ಮಾಡುವುದಾಗಿ ಆದೇಶ ಹೊರಡಿಸಲಾಗಿದೆ. ಆ.15ರಂದು ಧ್ವಜಾರೋಹಣ ಮಾಡಲು ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿಗೆ ಅನುಮತಿ ನೀಡಲಾಗಿದೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಸಂಘಪರಿವಾರವು ಈದ್ಗಾ ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಚರಿಸಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದವು. ಮಾಲಕತ್ವದ ವಿಚಾರದಲ್ಲಿ ಈಗಾಗಲೇ ವಿವಾದಗಳು ಸೃಷ್ಟಿಯಾಗಿದ್ದ ಹಿನ್ನಲೆ ಸಂಘಟನೆಗಳಿಗೆ ಧ್ವಜಾರೋಹಣ ಮಾಡಲು ಅನುಮತಿ ನೀಡಿದಲ್ಲಿ, ಶಾಂತಿಭಂಗವಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸರಕಾರದ ವತಿಯಿಂದಲೇ ಧ್ವಜಾರೋಹಣ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)