varthabharthi


ಉಡುಪಿ

ಮಣಿಪಾಲ: ಸ್ಕೂಟರ್ ಕಳವು ಆರೋಪಿ ಸೆರೆ

ವಾರ್ತಾ ಭಾರತಿ : 12 Aug, 2022

ಮಣಿಪಾಲ, ಆ.12: ಶಿವಳ್ಳಿ ಗ್ರಾಮದ ವಿ.ಪಿ.ನಗರದ ಅಪಾರ್ಟ್‌ಮೆಂಟ್ ಒಂದರ ಬಳಿ ಆ.8ರಂದು ನಿಲ್ಲಿಸಿದ್ದ ಟಿವಿಎಸ್ ಸ್ಕೂಟರ್‌ನ್ನು ಕಳವು ಮಾಡಿದ ಆರೋಪಿಯನ್ನು ಮಣಿಪಾಲ ಪೊಲೀಸರು ಇಂದು ಬಂಧಿಸಿದ್ದಾರೆ. 

ಬಂಧಿತನನ್ನು ಮಣಿಪಾಲದ ಗುರುರಾಜ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಉಡುಪಿ ನಗರ, ಕುಂದಾಪುರ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಆರೋಪಿಯನ್ನು ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ., ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿ ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)