varthabharthi


ರಾಷ್ಟ್ರೀಯ

ಚೆನ್ನೈ: ನೌಕರರನ್ನು ಶೌಚಗೃಹದಲ್ಲಿ ಕೂಡಿ ಹಾಕಿ ಬ್ಯಾಂಕ್‌ನಿಂದ 32 ಕೆ.ಜಿ. ಚಿನ್ನಾಭರಣ ದರೋಡೆ

ವಾರ್ತಾ ಭಾರತಿ : 13 Aug, 2022

Photo : NDTV 

ಚೆನ್ನೈ, ಆ.13:  ಇಲ್ಲಿನ ಬ್ಯಾಂಕೊಂದರಿಂದ ಹಲವಾರು ಕೋಟಿ ರೂ. ಮೌಲ್ಯದ 32 ಕೆ.ಜಿ. ಮೌಲ್ಯದ ಚಿನ್ನವನ್ನು  ದರೋಡೆಕೋರರ ಗುಂಪೊಂದು ದೋಚಿ ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಅರುಂಬಾಕಂ ಪ್ರದೇಶದಲ್ಲಿರುವ  ಫೆಡರಲ್‌ಬ್ಯಾಂಕ್ ಗೋಲ್ಡ್ ಲೋನ್ ಶಾಖೆಗೆ ನುಗ್ಗಿದ ಮುಸುಕುಧರಿಸಿದ ಮೂರು ಮಂದಿಯ ಗುಂಪೊಂದು  ಉದ್ಯೋಗಿಗಳನ್ನು ಶೌಚಗೃಹದಲ್ಲಿ ಕೂಡಿ ಹಾಕಿ  ಚಿನ್ನವನ್ನು ದರೋಡೆ ಮಾಡಿದೆ.

‘‘ಬ್ಯಾಂಕ್‌ನ ಸ್ಟ್ರಾಂಗ್‌ನ ಬೀಗದ ಕೀಗಳನ್ನು ಕಸಿದುಕೊಂಡ ದುಷ್ಕರ್ಮಿಗಳು, ಉದ್ಯೋಗಿಗಳನ್ನು ಶೌಚಗೃಹದಲ್ಲಿ ಕೂಡಿಹಾಕಿ, ಬ್ಯಾಗ್‌ಗಳಲ್ಲಿ ಚಿನ್ನ ತುಂಬಿಸಿ ಪರಾರಿಯಾಗಿದ್ದಾರೆ. ಸುಮಾರು 32 ಕೆ.ಜಿ. ಚಿನ್ನಾಭರಣ ದರೋಡೆಯಾಗಿದೆ’’ ಎಂದು ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜೀವಾಲ್ ತಿಳಿಸಿದ್ದಾರೆ. ಈ ದರೋಡೆಯು   ಒಳಗಿನವರ ಕೆಲಸಾಗಿರುವ ಸಾಧ್ಯತೆಯಿದೆಯೆಂದು ಪೊಲೀಸರು ಶಂಕಿಸಿದ್ದಾರೆ.

ದರೋಡೆಕೋರರಲ್ಲಿ ಒಬ್ಬಾತ  ಅದೇ ಬ್ಯಾಕ್ ಶಾಖೆಯ  ಉದ್ಯೋಗಿಯೆಂದು ಶಂಕಿಸಲಾಗಿದೆಯೆಂದು  ಜಂಟಿ ಪೊಲೀಸ್ ಆಯುಕ್ತ ಟಿ.ಎಸ್.ಅನ್ಬು ತಿಳಿಸಿದ್ದಾರೆ.
ಕೃತ್ಯವೆಸಗುವ ಮುನ್ನ ದರೋಡೆಕೋರರು ತನಗೆ  ಲಘುಪೇಯವನ್ನು ನೀಡಿದ್ದರು. ಅದನ್ನು ಸೇವಿಸಿದ ಬಳಿಕ ತಾನು  ಪ್ರಜ್ಞಾಹೀನನಾಗಿದ್ದಾಗಿಯೂ  ಎಂದು  ಬ್ಯಾಂಕ್‌ನ ಭದ್ರತಾ  ಕಾವಲುಗಾರ ಹೇಳಿರುವುದಾಗಿ ಎನ್‌ಡಿಟಿವಿ ಸುದ್ದಿ ವಾಹಿನಿ ವರದಿ ಮಾಡಿದೆ.

ದರೋಡೆಕೋರರಲ್ಲಿ ಒಬ್ಬಾತ ಬ್ಯಾಂಕ್ ನೌಕರನಾಗಿದ್ದುದರಿಂದ ಕಾವಲುಗಾರನಿಗೆ ಅವರ ಬಗ್ಗೆ ಸಂದೇಹ ಬಂದಿರಲಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಷ್ಕರ್ಮಿಗನ್ನು ಸೆರೆಹಿಡಿಯಲು ಪೊಲೀಸರು ವಿಶೇಷ ತಂಡಗಳನ್ನು ನಿರ್ಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)