varthabharthi


ಕರ್ನಾಟಕ

ಸಚಿವ ಮಾಧುಸ್ವಾಮಿ ತನಗಿಂತ ಮೇಧಾವಿ ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ: ಸಚಿವ ಸೋಮಶೇಖರ್ ತಿರುಗೇಟು

ವಾರ್ತಾ ಭಾರತಿ : 14 Aug, 2022

ಮೈಸೂರು: ಸಚಿವ ಜೆ.ಸಿ. ಮಾಧುಸ್ವಾಮಿ(JC Madhu Swamy) ನಾನೇ ಮೇಧಾವಿ, ನನಗಿಂತ ಮೇಧಾವಿ ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ. ಮೇಧಾವಿ ಸಚಿವರು ಹೇಳಿದ ಹಾಗೆ ಸರ್ಕಾರ ಕುಂಟುತ್ತಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್(ST Somashekhar) ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಧಾವಿ ಸಚಿವರು ಹೇಳಿದಂತೆ ಸರ್ಕಾರ ಕುಂಟುತ್ತಿಲ್ಲ. ಬಹುಶಃ ಅವರ ಇಲಾಖೆಯ ಬಗ್ಗೆ ಅವರು ಹೇಳಿರಬಹುದು ಎಂದು ಟೀಕಿಸಿದರು.

ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆ ಮಾಧ್ಯಮಕ್ಕೆ ಅವರೇ ಮಾಹಿತಿ ನೀಡುತ್ತಾರೆ. ಆಗ ಇವರಿಗೆ ಗೊತ್ತಾಗಲಿಲ್ಲವಾ? ಅದು ಅವರದೇ ಧ್ವನಿಯಾಗಿದ್ದರೆ ತಪ್ಪು. ಆಗಸ್ಟ್​ 28ಕ್ಕೆ ಒಂದು ವರ್ಷದ ಸಾಧನೆಯ ಕಾರ್ಯಕ್ರಮ ಇದೆ. ಬಿ ಎಸ್ ಯಡಿಯೂರಪ್ಪನವರು ಇದ್ದಾಗಲೂ ಕೆಲಸವಾಗಿದೆ. ಬಸವರಾಜ ಬೊಮ್ಮಾಯಿವರ ಸರ್ಕಾರದಲ್ಲೂ ಸಹಾ ಉತ್ತಮ ಕೆಲಸವಾಗುತ್ತಿದೆ ಎಂದರು.

ಎಸ್ ಟಿ ಸೋಮಶೇಖರ್ ನಾನು ಹೇಳಿದ ಕೆಲಸ ಮಾಡಿಲ್ಲ ಎಂಬ ಸಚಿವ ಜೆ ಸಿ ಮಾಧುಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಮಂತ್ರಿ ಹೇಳಿದ್ರು ಅಂತಾ ಕಾನೂನು ಬಾಹಿರವಾಗಿ ನೋಟಿಸ್ ಕೊಡಲು ಸಾಧ್ಯವಿಲ್ಲ. ಸಹಕಾರ ಬ್ಯಾಂಕ್ ರೈತರ ಆಸ್ತಿ ರೈತರಿಗೆ ಸೇರಿದ್ದು. ಮಾಧುಸ್ವಾಮಿ ಹೇಳಿಕೆಯಲ್ಲಿ ಯಾವುದೇ ಸತ್ಯ ಇಲ್ಲ. ಒಬ್ಬರನ್ನು ಗುರಿ ಮಾಡುವುದು ಸರಿಯಲ್ಲ. ತನಿಖೆಯಲ್ಲಿ ತಪ್ಪಿತಸ್ಥರು ಅಂತಾ ಆದರೆ ಮಾತ್ರ ಕ್ರಮ ಎಂದು ಹೇಳಿದರು.

ಇದನ್ನೂ ಓದಿ: ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಪ್ರಕರಣ: ಪುನೀತ್ ಕೆರೆಹಳ್ಳಿ ಸೇರಿ ನಾಲ್ವರ ಬಂಧನ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)