varthabharthi


ಅಂತಾರಾಷ್ಟ್ರೀಯ

ತೈವಾನ್ ವಾಯು ರಕ್ಷಣಾ ವಲಯ ಪ್ರವೇಶಿಸಿದ ಚೀನಾದ ಸೇನಾ ವಿಮಾನ

ವಾರ್ತಾ ಭಾರತಿ : 14 Aug, 2022

PHOTO SOURCE: REUTERS

ತೈಪೆ, ಆ.14: ತೈವಾನ್ ಬಳಿ ಚೀನಾದ ಸಮರಾಭ್ಯಾಸ ಮುಂದುವರಿದಿರುವಂತೆಯೇ, ಚೀನಾದ 11 ಸೇನಾ ವಿಮಾನಗಳು ರವಿವಾರ ತೈವಾನ್ ಜಲಸಂಧಿಯ ಮಧ್ಯರೇಖೆ ದಾಟಿವೆ ಅಥವಾ ತೈವಾನ್‌ನ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ತೈವಾನ್‌ನ ರಕ್ಷಣಾ ಇಲಾಖೆ ಹೇಳಿದೆ.

ತೈವಾನ್ ಬಳಿ ನಡೆಸುತ್ತಿದ್ದ ಸಮರಾಭ್ಯಾಸವನ್ನು ಚೀನಾ ಮುಂದುವರಿಸಿದೆ, ಆದರೆ ಕಳೆದ ವಾರಕ್ಕೆ ಹೋಲಿಸಿದರೆ ತುಸು ಕಡಿಮೆ ಪ್ರಮಾಣದಲ್ಲಿದೆ ಎಂದು ವರದಿಯಾಗಿದೆ.ಚೀನಾದ ಸರಕಾರ ತೈವಾನ್ ದ್ವೀಪದಲ್ಲಿ ಯಾವತ್ತೂ ಆಳ್ವಿಕೆ ನಡೆಸಿಲ್ಲ, ಆದ್ದರಿಂದ ತೈವಾನ್‌ನ ಭವಿಷ್ಯವನ್ನು ತಾನು ನಿರ್ಧರಿಸುತ್ತೇನೆ ಎಂದು ಪ್ರತಿಪಾದಿಸಲು ಆ ದೇಶಕ್ಕೆ ಅಧಿಕಾರವಿಲ್ಲ. ಇದನ್ನು ತೈವಾನ್ ಜನತೆ ನಿರ್ಧರಿಸಲಿದ್ದಾರೆ ಎಂದು ತೈವಾನ್ ಸರಕಾರ ಹೇಳಿದೆ.1949ರಲ್ಲಿ ಚೀನಾದಲ್ಲಿ ನಡೆದ ಅಂತರ್ಯುದ್ಧದಲ್ಲಿ ಮಾವೊ ಝೆದಾಂಗ್ ಅವರ ಕಮ್ಯುನಿಸ್ಟ್ ಪಾರ್ಟಿಯ ಎದುರು ಸೋತ ರಿಪಬ್ಲಿಕ್ ಆಫ್ ಚೀನಾ ಸರಕಾರ ತೈವಾನ್ ದ್ವೀಪಕ್ಕೆ ಪಲಾಯನ ಮಾಡಿತ್ತು. ತೈವಾನ್ ಈಗಲೂ ತನ್ನ ಭೌಗೋಳಿಕ ವ್ಯಾಪ್ತಿಗೆ ಸೇರಿರುವ ಪ್ರದೇಶ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅಗತ್ಯಬಿದ್ದರೆ ಬಲಪ್ರಯೋಗಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ತೈವಾನ್ ಅನ್ನು ತನ್ನ ವಶಕ್ಕೆ ಪಡೆಯುವುದಾಗಿ ಈ ಹಿಂದೆಯೇ ಘೋಷಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)