varthabharthi


ದಕ್ಷಿಣ ಕನ್ನಡ

AIPIF ಮೆಸೇಜ್ ಆಫ್ ಹ್ಯೂಮಾನಿಟಿ, ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

ವಾರ್ತಾ ಭಾರತಿ : 14 Aug, 2022

ಮಂಗಳೂರು:  AIPIF ಮೆಸೇಜ್ ಆಫ್ ಹ್ಯೂಮಾನಿಟಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಇಖ್ರಾ ಅರೇಬಿಕ್ ಸ್ಕೂಲ್ ಕಂಕನಾಡಿಯಲ್ಲಿ ರವಿವಾರ ನಡೆಯಿತು.

ಪ್ರೊ. ಯುಟಿ ಇಫ್ತಿಕಾರ್ ಅಲಿ ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಅಡ್ವೋಕೇಟ್ ಪದ್ಮರಾಜ್, ಎಂ.ಸಿ.ಸಿ ಬ್ಯಾಂಕ್ ಮುಖ್ಯಸ್ಥ ಅನಿಲ್ ಲೋಬೊ, ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಇಖ್ರಾ ಅರೇಬಿಕ್ ಸ್ಕೂಲ್‌ ಪ್ರಾಂಶುಪಾಲರಾದ ಸಲೀಂ ನದ್ವಿ, AIPIF ನೇತಾರರಾದ ಫರ್ಹಾನ್ ನದ್ವಿ, ದಾವೂದ್ ಅಹ್ಮದ್ ನದ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫರ್ಹಾನ್ ನದ್ವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಂತ ಧರ್ಮವನ್ನು ಅನುಸರಿಸಿರಿ, ಇತರ ಧರ್ಮವನ್ನು ಗೌರವಿಸಿರಿ. ಸೌಹಾರ್ದತೆಯಿಂದ ಹಾಗೂ ಸಹಬಾಳ್ವೆಯಿಂದ ಮಾನವರು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಶಾಂತಿಯಿಂದ ಸೌಹಾರ್ದತೆಯಿಂದ ಬದುಕಬೇಕು ಎಂಬ ಸಂದೇಶ ಸಾರಿದರು.

ಪರಿಸರದ ಹಲವು ಉತ್ಸಾಹಿ ಯುವಕರು ರಕ್ತದಾನ ಮಾಡಿ ಸಹಕರಿಸಿದರು. ಸ್ಥಳೀಯ ನಾಗರಿಕರು ಮತ್ತು AIPIF ಮೆಸೇಜ್ ಆಫ್ ಹ್ಯೂಮಾನಿಟಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)