ರಾಣಿ ಎಲಿಝಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಲಂಡನ್ ತಲುಪಿದ ರಾಷ್ಟ್ರಪತಿ ದ್ರೌಪದಿ ಮುರ್ಮು
photo- @rashtrapatibhvn
ಲಂಡನ್: ರಾಣಿ ಎಲಿಝಬೆತ್ II ಅವರ ಸರಕಾರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu)ಶನಿವಾರ ಸಂಜೆ ಲಂಡನ್ಗೆ ಆಗಮಿಸಿದರು.
ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್ನ ತಮ್ಮ ನಿವಾಸದಲ್ಲಿ 96 ನೇ ವಯಸ್ಸಿನಲ್ಲಿ ನಿಧನರಾದ ರಾಣಿ ಎಲಿಝಬೆತ್ II ಅವರ ಅಂತ್ಯಕ್ರಿಯೆಯನ್ನು ಸೆಪ್ಟೆಂಬರ್ 19 ರ ಬೆಳಿಗ್ಗೆ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ನೆರವೇರಿಸಲಾಗುತ್ತದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ರಿಟನ್ ಗೆ ಮೂರು ದಿನಗಳ ಭೇಟಿಯಲ್ಲಿದ್ದಾರೆ. ಈ ಸಮಯದಲ್ಲಿ ಅವರು ಸೋಮವಾರದ ರಾಣಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ರವಿವಾರ ಸಂಜೆ ಕಿಂಗ್ ಚಾರ್ಲ್ಸ್ III ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಯೋಜಿಸಲಾದ ವಿಶ್ವ ನಾಯಕರ ಸ್ವಾಗತ ಸಮಾರಂಭಕ್ಕೂ ಮುರ್ಮು ಅವರಿಗೆ ಆಮಂತ್ರಣ ನೀಡಲಾಗಿದೆ.
" ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎಲಿಝಬೆತ್ II ರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಹಾಗೂ ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ಯುನೈಟೆಡ್ ಕಿಂಗ್ಡಮ್ ನ ಲಂಡನ್ಗೆ ತೆರಳಿದ್ದಾರೆ" ಎಂದು ವಿಮಾನವು ದಿಲ್ಲಿಯಿಂದ ಹೊರಡುತ್ತಿದ್ದಂತೆ ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.
President Droupadi Murmu emplanes for London, United Kingdom to attend the State Funeral of H.M. Queen Elizabeth II and offer condolences on behalf of the Government of India. pic.twitter.com/HEFkhoh62J
— President of India (@rashtrapatibhvn) September 17, 2022