varthabharthi


ಸಿನಿಮಾ

ರವೀಶ್‌ ಕುಮಾರ್‌ ಕುರಿತ ಸಾಕ್ಷ್ಯಚಿತ್ರಕ್ಕೆ ಟೊರೊಂಟೋ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ

ವಾರ್ತಾ ಭಾರತಿ : 20 Sep, 2022

ಹೊಸದಿಲ್ಲಿ: ಖ್ಯಾತ ಪತ್ರಕರ್ತ, ಎನ್‌ಡಿಟಿವಿ(NDTV) ಯ ರವೀಶ್‌ ಕುಮಾರ್‌(Ravish Kumar) ಅವರ ವೃತ್ತಿ ಜೀವನಾಧರಿತ ಸಾಕ್ಷ್ಯಚಿತ್ರ ʻವೈಲ್‌ ವಿ ವಾಚ್ಡ್‌ʼ(While We Watched) ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022(Toronto International Film Festival) ರಲ್ಲಿ ಪ್ರಶಸ್ತಿ ಪಡೆದಿದೆ. ಈ ಸಾಕ್ಷ್ಯಚಿತ್ರವನ್ನು ವಿನಯ್‌ ಶುಕ್ಲಾ ನಿರ್ಮಿಸಿದ್ದಾರೆ.

ಈ 96 ನಿಮಿಷಗಳ ಸಾಕ್ಷ್ಯಚಿತ್ರ ʻನಮಸ್ಕಾರ್!‌ ಮೈ ರವೀಶ್‌ ಕುಮಾರ್‌ʼ ಹಿಂದಿ ಭಾಷೆಯಲ್ಲಿದ್ದು ಆಂಪ್ಲಿಫೈ ವಾಯ್ಸಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಖ್ಯಾತ ಟಿವಿ ಪತ್ರಕರ್ತರಾಗಿರುವ ರವೀಶ್‌ ಕುಮಾರ್‌ ಅವರ ಕಾರ್ಯವೈಖರಿ ಹಾಗೂ ಸತ್ಯದ ಜಗತ್ತು ಹಾಗೂ ಹರಡಿರುವ ಸುಳ್ಳು ಮಾಹಿತಿಗಳ ಸುತ್ತ ಅವರು ಬೆಳಕು ಚೆಲ್ಲುವ ಪರಿಯನ್ನು ಈ ಸಾಕ್ಷ್ಯಚಿತ್ರ ಅದ್ಭುತವಾಗಿ ಪ್ರೇಕ್ಷಕರ ಮುಂದಿಡುತ್ತದೆ.

ವಿನಯ್‌ ಶುಕ್ಲಾ ಅವರ ಚೊಚ್ಚಲ ಸಾಕ್ಷ್ಯಚಿತ್ರ ʻಆನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌ʼ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತವರ ಆಮ್‌ ಆದ್ಮಿ ಪಕ್ಷದ ಕುರಿತಾಗಿತ್ತು. ಈ ಸಾಕ್ಷ್ಯ ಚಿತ್ರವನ್ನು ಕೂಡ ಟೊರೊಂಟೋ ಚಿತ್ರೋತ್ಸವದಲ್ಲಿ 2016 ರಲ್ಲಿ ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ:  ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ ನೀಡಿದ ವೀಡಿಯೊ ವೈರಲ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)