ಮಂಗಳೂರು, ಸೆ.20: ನಗರದ ಜೆಪ್ಪು ಮೋರ್ಗನ್ಗೇಟ್ನ ಆದರ್ಶನಗರ ನಿವಾಸಿ ಹಾಗೂ ಬಂದರ್ನಲ್ಲಿ ಅಟೋಮೊಬೈಲ್ ಬಿಡಿಭಾಗಗಳ ಮಾರಾಟ ಮಳಿಗೆಯನ್ನು ಹೊಂದಿದ್ದ ಎಂ. ಅಬ್ದುಲ್ ಕರೀಂ (62) ಮಂಗಳವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.