ಸೇನಾ ಸನ್ನದ್ಧತೆಗೆ ಪುಟಿನ್ ಆದೇಶ ಬೆನ್ನಲ್ಲೇ ರಶ್ಯದಿಂದ ತೆರಳುವ ವಿಮಾನಗಳ ಟಿಕೆಟ್ಗೆ ಭಾರೀ ಬೇಡಿಕೆ
ಮಾಸ್ಕೊ, ಸೆ.21: ಉಕ್ರೇನ್ ಮೇಲಿನ ಆಕ್ರಮಣವನ್ನು ತೀವ್ರಗೊಳಿಸುವ ಉದ್ದೇಶದಿಂದ ಮೀಸಲು ಯೋಧರನ್ನು ಸಜ್ಜುಗೊಳಿಸಲಾಗುವುದು ಎಂದು ರಶ್ಯ ಅಧ್ಯಕ್ಷ ಪುಟಿನ್ ಘೋಷಿಸಿದ ಬೆನ್ನಲ್ಲೇ ರಶ್ಯದಿಂದ ತೆರಳುವ ವಿಮಾನಗಳ ಟಿಕೆಟ್ಗೆ ಬೇಡಿಕೆ ಹೆಚ್ಚಿದೆ ಎಂದು ವರದಿಯಾಗಿದೆ.
ಯುದ್ಧ ಮಾಡಲು ಸಮರ್ಥ ವಯಸ್ಸಿನ ಜನರನ್ನು ರಶ್ಯ ಬಿಟ್ಟು ತೆರಳಲು ನಿರ್ಬಂಧಿಸಬಹುದು ಎಂಬ ಭೀತಿ ಹೆಚ್ಚಿದೆ. ಈ ಕಾರಣದಿಂದ ಏವಿಯಾಸೇಲ್ಸ್ ವೆಬ್ಸೈಟ್(ವಿಮಾನ ಟಿಕೆಟ್ ಖರೀದಿಸಲು ಬಳಸುವ ವೆಬ್ಸೈಟ್)ನಲ್ಲಿ ರಶ್ಯದಿಂದ ಹೊರತೆರಳಲು ವಿಮಾನದ ಟಿಕೆಟ್ಗಳಿಗಾಗಿ ಹುಡುಕಾಟ ಭರದಿಂದ ಸಾಗಿದೆ ಎಂದು ಗೂಗಲ್ ಅಂಕಿಅAಶ ತಿಳಿಸಿದೆ.
ರಶ್ಯದಿಂದ ಟರ್ಕಿಯ ಇಸ್ತಾನ್ಬುಲ್ ಹಾಗೂ ಅರ್ಮೇನಿಯಾದ ಯೆರೆವಾನ್ ನಗರಕ್ಕೆ ನೇರಪ್ರಯಾಣದ ವಿಮಾನದ ಟಿಕೆಟ್ಗಳು ಬುಧವಾರ ಸೋಲ್ಡ್ಔಟ್ ಆಗಿದೆ(ಈ ಎರಡೂ ನಗರಕ್ಕೆ ತೆರಳಲು ರಶ್ಯ ನಾಗರಿಕರಿಗೆ ವೀಸಾದ ಅಗತ್ಯವಿಲ್ಲ) ಎಂದು ಏವಿಯಾಸೇಲ್ಸ್ ಮಾಹಿತಿ ನೀಡಿದೆ. ಜಾರ್ಜಿಯಾದ ಟಿಬಿಲ್ಸಿ ನಗರಕ್ಕೆ ತೆರಳುವ ಟಿಕೆಟ್ಗಳೂ ಮಾರಾಟವಾಗಿದೆ. ಮಾಸ್ಕೋದಿಂದ ದುಬೈಗೆ ಪ್ರಯಾಣಿಸುವ ಟಿಕೆಟ್ ದರ ಬುಧವಾರ 5 ಪಟ್ಟು ಏರಿಕೆ ಕಂಡಿದ್ದು 5000 ಡಾಲರ್ಗೆ ತಲುಪಿದೆ ಎಂದು ವರದಿಯಾಗಿದೆ.