varthabharthi


ನಿಧನ

ವೇಣುಗೋಪಾಲ

ವಾರ್ತಾ ಭಾರತಿ : 24 Sep, 2022

ಮಂಗಳೂರು, ಸೆ.24: ನಗರದ ಉರ್ವಸ್ಟೋರ್ ನಿವಾಸಿ ಹಾಗೂ ಡಿವೈಎಫ್‌ಐ ಸಕ್ರಿಯ ಕಾರ್ಯಕರ್ತ ವೇಣುಗೋಪಾಲ (47) ಶುಕ್ರವಾರ ರಾತ್ರಿ  ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಡಿವೈಎಫ್‌ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ವೇಣುಗೋಪಾಲ ಉರ್ವಸ್ಟೋರ್ ಪರಿಸರದಲ್ಲಿ ಯುವಜನರ ಹಾಗೂ ಜನಸಾಮಾನ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಹಿತೈಷಿಯಾಗಿದ್ದರು.

*ಸಿಪಿಎಂ ನಾಯಕರಾದ ವಸಂತ ಆಚಾರಿ, ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ಸುರೇಶ್ ಬಜಾಲ್, ಮನೋಜ್ ಉರ್ವಸ್ಟೋರ್, ಪ್ರವೀಣ್ ಬಂಟ್ವಾಳ ಮತ್ತಿತರರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)