varthabharthi


ಅಂತಾರಾಷ್ಟ್ರೀಯ

'ಭಾರತ್‌ ಜೋಡೋ' ಯಾತ್ರೆಗೆ ಖ್ಯಾತ ಹಾಲಿವುಡ್‌ ನಟ ಜಾನ್‌ ಕುಸಾಕ್‌ ಬೆಂಬಲ

ವಾರ್ತಾ ಭಾರತಿ : 24 Sep, 2022

ಜಾನ್‌ ಕುಸಾಕ್‌ (Photo: Instagram/johncusack)

ವಾಷಿಂಗ್ಟನ್: ಈ ಹಿಂದೆ ಭಾರತದಲ್ಲಿ ನಡೆದ ರೈತರ ಪ್ರತಿಭಟನೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಖ್ಯಾತ ಹಾಲಿವುಡ್ ನಟ ಜಾನ್ ಕುಸಾಕ್(Hollywood Actor John Cusack) ಇದೀಗ ಕಾಂಗ್ರೆಸ್(Congress) ಸಂಸದ ರಾಹುಲ್ ಗಾಂಧಿ(Rahul Gandhi) ಅವರ 'ಭಾರತ್ ಜೋಡೋ' ಯಾತ್ರೆಗೆ (Bharat Jodo Yatra) ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಾನ್ ಕುಸಾಕ್ ಅವರು ಶನಿವಾರ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯನ್ನು ಬೆಂಬಲಿಸಿದರು. "ಭಾರತೀಯ ಸಂಸತ್ ಸದಸ್ಯ ರಾಹುಲ್ ಗಾಂಧಿ ಅವರು ಕಾಶ್ಮೀರಕ್ಕೆ - ಕೇರಳದಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ" ಎಂದು ಕುಸಾಕ್‌ ಟ್ವೀಟ್‌ ಮಾಡಿದ್ದಾರೆ.

ಟ್ವಿಟ್ಟರ್ ಬಳಕೆದಾರರು ರಾಹುಲ್‌ ಗಾಂಧಿಗೆ ಬೆಂಬಲ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದಾಗ, , "ಹೌದು - ಎಲ್ಲೆಡೆ ಫ್ಯಾಸಿಸ್ಟ್ ವಿರೋಧಿಗಳೊಂದಿಗೆ ಐಕಮತ್ಯ!" ಎಂದು ಜಾನ್ ಕುಸಾಕ್ ಪ್ರತಿಕ್ರಿಯಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಉದ್ದದ, 12 ರಾಜ್ಯಗಳನ್ನು ಒಳಗೊಂಡ 'ಭಾರತ್ ಜೋಡೋ ಯಾತ್ರೆ' 150 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. 21 ದಿನಗಳ ಕಾಲ ಕರ್ನಾಟಕದಲ್ಲಿ ಪಾದಯಾತ್ರೆ ನಡೆಯಲಿದೆ. 

ಇದನ್ನೂ ಓದಿ: ಉತ್ತರಾಖಂಡ: ಹತ್ಯೆಯಾದ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಸಲು ಯತ್ನಿಸಿದ್ದ ಆರೋಪಿಗಳು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)