varthabharthi


ಸಿನಿಮಾ

ಪತ್ರಕರ್ತೆಯೊಡನೆ ಅನುಚಿತ ವರ್ತನೆ ಆರೋಪ: ಮಲಯಾಳಂ ನಟ ಶ್ರೀನಾಥ್ ಭಾಸಿ ಬಂಧನ

ವಾರ್ತಾ ಭಾರತಿ : 26 Sep, 2022

Photo: Twitter/@ANI

ಕೊಚ್ಚಿ: ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಮಲಯಾಳಂ ನಟ(Malayalam actor) ಶ್ರೀನಾಥ್ ಭಾಸಿ(Sreenath Bhasi)ಯನ್ನು ಕೇರಳದ ಮರಡು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ, ಪತ್ರಕರ್ತರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘವು ಭಾಸಿಯನ್ನು ಕರೆದು ವಿಚಾರಿಸುವ ಸಾಧ್ಯತೆಯಿದೆ ಎಂದು 'ಮಾತೃಭೂಮಿ' ವರದಿ ಮಾಡಿದೆ.

ನಟನನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಮರಡು ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ,  ಹೆಚ್ಚಿನ ಸಮಯಾವಕಾಶ ಕೋರಿದ್ದ ನಟ, ತನ್ನ ಗೆಳೆಯರೊಂದಿಗೆ ಮಧ್ಯಾಹ್ನದ ನಂತರ ಠಾಣೆಗೆ ತಲುಪಿದ್ದಾರೆ. ನಟನ ವಿಚಾರಣೆ ಮುಂದುವರೆದಿದೆ ಎಂದು ವರದಿಯಾಗಿದೆ.

ಪತ್ರಕರ್ತೆಯನ್ನು ಅವಮಾನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಶ್ರೀನಾಥ್ ಭಾಸಿ ತನ್ನ ಇತ್ತೀಚಿನ ಚಲನಚಿತ್ರದ ಪ್ರಚಾರದ ವೀಡಿಯೊ ಸಂದರ್ಶನದಲ್ಲಿ ತನ್ನ ಮೇಲೆ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಆನ್‌ಲೈನ್ ಮಾಧ್ಯಮದ ನಿರೂಪಕಿ ಒಬ್ಬರು ಆರೋಪಿಸಿದ್ದರು.  ಅವರು ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು.

ಇದನ್ನೂ ಓದಿ: ಬೆಂಗಳೂರು: ನಾಪತ್ತೆಯಾಗಿದ್ದ ಮೂವರು ಬಾಲಕಿಯರು ಚೆನ್ನೈನಲ್ಲಿ ಪತ್ತೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)