varthabharthi


ಕ್ರೀಡೆ

36ನೇ ಆವೃತ್ತಿಯ ನ್ಯಾಶನಲ್ ಗೇಮ್ಸ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ವಾರ್ತಾ ಭಾರತಿ : 29 Sep, 2022

ಅಹಮದಾಬಾದ್, ಸೆ.29: ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ 36ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್ ಅನ್ನು ಉದ್ಘಾಟಿಸಿದರು.

 ಗುಜರಾತ್ ಈಜು ತಾರೆ ಮಾನಾ ಪಟೇಲ್ ಅವರು ಏಕತೆಯ ಸಾಂಕೇತಿಕ ಜ್ಯೋತಿಯನ್ನು ಪ್ರಧಾನಿಗೆ ಹಸ್ತಾಂತರಿಸಿದರು.

ಹಾಲಿ ಹಾಗೂ ಮಾಜಿ ಕ್ರೀಡಾಳುಗಳಾದ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ, ಒಲಿಂಪಿಕ್ಸ್ ಪದಕ ವಿಜೇತರಾದ ಪಿ.ವಿ. ಸಿಂಧು, ರವಿ ದಹಿಯಾ, ಮೀರಾಬಾಯಿ ಚಾನು, ಗಗನ್ ನಾರಂಗ್, ಮಾಜಿ ಹಾಕಿ ನಾಯಕ ಹಾಗೂ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ, ಅಂಜು ಬಾಬ್ಬಿ ಜಾರ್ಜ್ ಸಹಿತ ಹಲವರು ಸಮಾರಂಭವನ್ನು ವೀಕ್ಷಿಸಿದರು.

ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ದೇಶಾದ್ಯಂತ 7,000ಕ್ಕೂ ಅಧಿಕ ಅತ್ಲೀಟ್‌ಗಳನ್ನು ಗುಜರಾತ್ ರಾಜ್ಯದ ಪರವಾಗಿ ಸ್ವಾಗತಿಸಿದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)