varthabharthi


ರಾಷ್ಟ್ರೀಯ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವೈಯುಕ್ತಿಕ ದತ್ತಾಂಶ ರಕ್ಷಣೆ ವಿಧೇಯಕ ಮಂಡನೆ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ

ವಾರ್ತಾ ಭಾರತಿ : 29 Sep, 2022

ಹೊಸದಿಲ್ಲಿ, ಸೆ. 29: ಸಂಸತ್ತಿನ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವೈಯುಕ್ತಿಕ ದತ್ತಾಂಶ ರಕ್ಷಣೆ ವಿಧೇಯಕವನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ವ್ಯಾಟ್ಸ್ ಆ್ಯಪ್ ಖಾಸಗಿ ನೀತಿ 2021ರ ಕುರಿತ ವಿಚಾರಣೆಯ ಸಂದರ್ಭ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮಾಹಿತಿ ನೀಡಿದರು. 

ಸಂಸತ್ತಿನ ಜಂಟಿ ಸಮಿತಿ ಈ ವಿಧೇಯಕಕ್ಕೆ 81 ಬದಲಾವಣೆಯ ಶಿಫಾರಸು ಹಾಗೂ 12 ಪ್ರಮುಖ ಶಿಫಾರಸುಗಳನ್ನು ಮಾಡಿದ ಬಳಿಕ ವೈಯುಕ್ತಿಕ ದತ್ತಾಂಶ ರಕ್ಷಣಾ ವಿಧೇಯಕ-2019 ಅನ್ನು ಆಗಸ್ಟ್ 3ರಂದು ಹಿಂಪಡೆಯಲಾಗಿತ್ತು. ಸ್ಪಷ್ಟ ಒಪ್ಪಿಗೆ ಇಲ್ಲದೆ ಜನರ ವೈಯುಕ್ತಿಕ ಮಾಹಿತಿಯನ್ನು ಬಳಸುವ ಕುರಿತು ನಿರ್ಬಂಧವನ್ನು ಪ್ರಸ್ತಾಪಿಸುವ ಈ ವಿಧೇಯಕಕ್ಕೆ ಕೇಂದ್ರ ಸಂಪುಟ 2019 ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)