varthabharthi


ಅಂತಾರಾಷ್ಟ್ರೀಯ

ಲೆಸ್ಬೋಸ್ ದ್ವೀಪದ ಬಳಿ ‌ದೋಣಿ ಮುಳುಗಿ 17 ವಲಸಿಗರ ಮೃತ್ಯು

ವಾರ್ತಾ ಭಾರತಿ : 6 Oct, 2022

ಅಥೆನ್ಸ್, ಅ.6: ಗ್ರೀಸ್ ಬಳಿಯ ಲೆಸ್ಬೋಸ್ ದ್ವೀಪದ ಬಳಿ ಗುರುವಾರ ಬೆಳಿಗ್ಗೆ  ವಲಸಿಗರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಿ ಕನಿಷ್ಟ 17 ವಲಸಿಗರು  ಮೃತಪಟ್ಟಿರುವುದಾಗಿ ಗ್ರೀಸ್ನ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ.

ಮೃತರಲ್ಲಿ ಮಹಿಳಾ ವಲಸಿಗರು ಹಾಗೂ ಒಬ್ಬ ಬಾಲಕ ಸೇರಿದ್ದಾನೆ. ಮುಳುಗಿದ್ದ ದೋಣಿಯಲ್ಲಿ 40 ಮಂದಿಯಿದ್ದರು. ಹಲವರನ್ನು ರಕ್ಷಿಸಲಾಗಿದ್ದು ಇದುವರೆಗೆ 17 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 10 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬುಧವಾರ ದಕ್ಷಿಣ ಗ್ರೀಸ್ನ ಕಿಥಿರಾ ದ್ವೀಪದ ಬಳಿ ಮತ್ತೊಂದು ದೋಣಿ ಮುಳುಗಿದ್ದು ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 80 ವಲಸಿಗರನ್ನು  ಅಧಿಕಾರಿಗಳು ರಕ್ಷಿಸಿದ್ದಾರೆ. ಇವರಲ್ಲಿ 18 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರು ಎಂದು ಗ್ರೀಸ್ನ ವಲಸೆ ಇಲಾಖೆಯ ಸಚಿವ ನೋಟಿಸ್ ಮಿಟರಾಚಿ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)