varthabharthi


ಕ್ರೀಡೆ

ಕತರ್ ನಲ್ಲಿ ಕೊನೆಯ ವಿಶ್ವಕಪ್ ಆಡುವೆ: ಲಿಯೊನೆಲ್ ಮೆಸ್ಸಿ

ವಾರ್ತಾ ಭಾರತಿ : 6 Oct, 2022

Photo:twitter

ಬ್ಯುನಸ್ ಐರಿಸ್: ಈ ವರ್ಷ ಕತರ್‌ನಲ್ಲಿ ನಡೆಯುವ ಫಿಫಾ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್ ಆಗಿರುತ್ತದೆ ಎಂದು ಅರ್ಜೆಂಟೀನದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ Lionel Messi ಹೇಳಿದ್ದಾರೆ.

ಇದು ನನ್ನ ಕೊನೆಯ ವಿಶ್ವಕಪ್. ಇದು ಖಚಿತ. ಈ ಕುರಿತು ನಿರ್ಧಾರವನ್ನು ಮಾಡಿದ್ದೇನೆ. ನಾನು ವಿಶ್ವಕಪ್‌ಗೆ ದಿನಗಣನೆ ಮಾಡುತ್ತಿರುವೆಎಂದು ಸಂವಾದದ ವೇಳೆ ಮೆಸ್ಸಿ ಹೇಳಿದ್ದಾರೆ.

ಮೆಸ್ಸಿ ಈ ಋತುವಿನಲ್ಲಿ ತನ್ನ ಕ್ಲಬ್ ಹಾಗೂ ದೇಶದ ಪರ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅರ್ಜೆಂಟೀನ 2019ರ ಬಳಿಕ ಸತತ 35 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ಮೆಸ್ಸಿ ಕಳೆದ ವರ್ಷ ಕೋಪ ಅಮೆರಿಕದಲ್ಲಿ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಫೈನಲ್‌ನಲ್ಲಿ ಬ್ರೆಝಿಲ್ ಅನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)