varthabharthi


ರಾಷ್ಟ್ರೀಯ

ಭಾರತಕ್ಕೆ ಚೀತಾ ಕರೆತರಲು ಪ್ರಮುಖ ಕಾರಣರಾಗಿದ್ದ ವನ್ಯಜೀವಿ ತಜ್ಞ 'ಚೀತಾ ಕಾರ್ಯಪಡೆ'ಯಿಂದ ಹೊರಕ್ಕೆ!

ವಾರ್ತಾ ಭಾರತಿ : 7 Oct, 2022

ಯಾದವೇಂದ್ರ ದೇವ್ ವಿಕ್ರಮ ಸಿನ್ಹಾ ಝಾಲಾ (Twitter/@moefcc)

ಹೊಸದಿಲ್ಲಿ: ಭಾರತದ ವನ್ಯಜೀವಿ ಸಂಸ್ಥೆಯ ಡೀನ್, ಖ್ಯಾತ ಜೀವಶಾಸ್ತ್ರಜ್ಞ ಯಾದವೇಂದ್ರ ದೇವ್ ವಿಕ್ರಮ ಸಿನ್ಹಾ ಝಾಲಾ ಅವರು, ಇತ್ತೀಚಿಗೆ ನಮೀಬಿಯಾದಿಂದ ತಂದ ಚೀತಾ ಯೋಜನೆಯಲ್ಲಿ 13 ವರ್ಷಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದರೂ, ನೂತನ ಚೀತಾ ಟಾಸ್ಕ್ ಫೋರ್ಸ್ ಅಥವಾ ಚೀತಾ ಕಾರ್ಯಪಡೆಯಲ್ಲಿ ಯಾವುದೇ ಸ್ಥಾನವನ್ನು ಪಡೆದಿಲ್ಲ. ಚೀತಾ ಕಾರ್ಯಪಡೆಯಲ್ಲಿ ಅವರಿಗೆ ಯಾವುದೇ ಸ್ಥಾನ ನೀಡದಿರುವ ಸರ್ಕಾರದ ಕ್ರಮದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ ಎಂದು indianexpress.com ವರದಿ ಮಾಡಿದೆ.

ಝಾಲಾ ಅವರು 2009 ರಿಂದ ವಿವಿಧ ಸರ್ಕಾರಗಳ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಚಿರತೆ ಯೋಜನೆಗೆ ತಾಂತ್ರಿಕ ನೆಲೆಯನ್ನು ಸಿದ್ಧಪಡಿಸಿದ್ದರು. ಅದಾಗ್ಯೂ ಚೀತಾ ಕಾರ್ಯಪಡೆಯಿಂದ ಅವರನ್ನು ಹೊರಗಿಟ್ಟಿರುವುದು ಪ್ರಶ್ನೆಗಳು ಏಳಲು ಕಾರಣವಾಗಿದೆ ಎಂದು ವರದಿಯಾಗಿದೆ. 
 
2010 ರಲ್ಲಿ  ಎಂಕೆ ರಂಜಿತ್ ಸಿನ್ಹಾ ರ ಅಡಿಯಲ್ಲಿ ಸ್ಥಾಪಿಸಲಾದ ಚೀತಾ ಕಾರ್ಯಪಡೆಯಲ್ಲಿ ಝಾಲಾ ಸದಸ್ಯರಾಗಿದ್ದರು, ಅಂದಿನಿಂದಲೂ ಯೋಜನೆಯ ತಾಂತ್ರಿಕ ತಂಡದ ಮುಖ್ಯಸ್ಥರಾಗಿದ್ದರು. 

ಸೆಪ್ಟೆಂಬರ್ 16 ರಂದು, ನಮೀಬಿಯಾದಿಂದ ಮೊದಲ ಬ್ಯಾಚ್ ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದಾಗ ಅದಕ್ಕೆ ಬೇಕಾದ ವ್ಯವಸ್ಥೆಯ, ಆರೈಕೆಯ ಮೇಲ್ವಿಚಾರಣೆಯನ್ನು ಝಾಲಾ ನೋಡಿಕೊಂಡಿದ್ದರು ಎಂದು tnie ವರದಿ ಹೇಳಿದೆ. ಅದಾಗ್ಯೂ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಝಾಲಾ ನಿರಾಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)