varthabharthi


ಸಿನಿಮಾ

ಬ್ರೈನ್ ಸ್ಟ್ರೋಕ್‌ ಗೆ ಒಳಗಾದ 24 ರ ಹರೆಯದ ನಟಿ ಐಂದ್ರಿಲಾ ಶರ್ಮಾ ನಿಧನ

ವಾರ್ತಾ ಭಾರತಿ : 20 Nov, 2022

ಐಂದ್ರಿಲಾ ಶರ್ಮಾ (Photo: Twitter/@t2telegraph)

ಕೋಲ್ಕತ್ತಾ: ಬ್ರೈನ್ ಸ್ಟ್ರೋಕ್‌ ಗೆ (Brain Stroke) ಒಳಗಾದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ (Aindrila Sharma) ಅವರು ಒಂದು ವಾರದ ಜೀವನ್ಮರಣ ಹೋರಾಟದ ನಂತರ ರವಿವಾರ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.

24 ವರ್ಷ ಹರೆಯದ ನಟಿ, ಮುರ್ಷಿದಾಬಾದ್ ಜಿಲ್ಲೆಯವರಾಗಿದ್ದು, ಬಂಗಾಳಿ ದೂರದರ್ಶನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 'ಜಿಯೋನ್ ಕಥಿ', 'ಜುಮುರ್' ಮತ್ತು 'ಜಿಬಾನ್ ಜ್ಯೋತಿ'ಯಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.

ಎರಡು ಬಾರಿ ಕ್ಯಾನ್ಸರ್ ನಿಂದ ಬದುಕುಳಿದಿದ್ದ ಐಂದ್ರಿಲಾ ಶರ್ಮಾ ಅವರು ಎವಿಂಗ್ಸ್ ಸಾರ್ಕೋಮಾದಿಂದ ಬಳಲುತ್ತಿದ್ದರು. ಆಕೆಗೆ ಶಸ್ತ್ರಚಿಕಿತ್ಸೆ ಮತ್ತು ಕಿಮೊರೇಡಿಯೇಶನ್ ಚಿಕಿತ್ಸೆ ನೀಡಲಾಗಿತ್ತು.

ನವೆಂಬರ್ 1 ರಂದು ಬ್ರೈನ್ ಸ್ಟ್ರೋಕ್ ಆದ ನಂತರ ಹೌರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು‌, ಆಕೆಯ ಮೆದುಳಿನ ಎಡಭಾಗದಲ್ಲಿ ಭಾರೀ ರಕ್ತಸ್ರಾವ ಆಗಿರುವುದು ಪರೀಕ್ಷೆ ವೇಳೆ ತಿಳಿದು ಬಂದಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಸ್ಫೋಟ ಪ್ರಕರಣ: ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)