varthabharthi


ಗಲ್ಫ್ ಸುದ್ದಿ

ಮರ್ಕಝುಲ್ ಹುದಾ ಕುಂಬ್ರ: ಸೌದಿ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 22 Nov, 2022

ಹಾಜಿ ಬಿ.ಝಕರಿಯಾ ಜೋಕಟ್ಟೆ | ಹಾಜಿ ಮುಹಮ್ಮದ್ ಫಾರೂಖ್ ಕನ್ಯಾನ | ಅಶ್ರಫ್ ನೌಶಾದ್ ಪೋಲ್ಯ | ಶಾಹುಲ್ ಹಮೀದ್ ಉಜಿರೆ

ಜುಬೈಲ್: ಪುತ್ತೂರು- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಜುಬೈಲ್ ಕುಕ್‌ಝೋನ್ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ.‌

ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಹಾಜಿ ಬಿ.ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಫಾರೂಖ್ ಕನ್ಯಾನ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ನೌಶಾದ್ ಪೋಲ್ಯ, ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್ ಉಜಿರೆ ಅವರನ್ನು ಆರಿಸಲಾಯಿತು

ಆಸಿಫ್ ಗೂಡಿನಬಳಿ (ಸೀನಿಯರ್ ಉಪಾಧ್ಯಕ್ಷರು), ಅಬ್ದುಲ್ ರಹೀಂ ಅರ್ಕುಳ (ಉಪಾಧ್ಯಕ್ಷರು), ಶಂಸುದ್ದೀನ್ ಬೈರಿಕಟ್ಟೆ, ಮುಹಮ್ಮದ್ ಅಲಿ ಕನ್ಯಾನ (ಕಾರ್ಯದರ್ಶಿಗಳು), ಸಲಹೆಗಾರರಾಗಿ ಖಮರುದ್ದೀನ್ ಗೂಡಿನಬಳಿ, ಹಾಜಿ ಅಬೂಬಕರ್ ರೈಸ್ಕೋ,ಮುಹಮ್ಮದ್ ಅಲಿ ಉಪ್ಪಿನಂಗಡಿ,ಇಖ್‌ಬಾಲ್ ಆರ್ಕುಳ,ಅಂಜದ್ ಖಾನ್ ಪೋಲ್ಯ ಅವರನ್ನು ಆರಿಸಲಾಯಿತು

ಸೌದಿ ಅರೇಬಿಯಾದ ಜುಬೈಲ್, ದಮಾಮ್, ರಿಯಾದ್,ಬುರೈದಾ ಹಾಗೂ ಜಿದ್ದಾ ಸಮಿತಿಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳು ರಾಷ್ಟ್ರೀಯ ಸಮಿತಿಯ ಕಾರ್ಯಕಾರಿ ಸದಸ್ಯರಾಗಿರುವರು.

ಮುಹಮ್ಮದ್ ಫಾರೂಖ್ ಕನ್ಯಾನ ಮಹಾಸಭೆಯ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸ‌ಅದಿ ಕುಡ್ತಮೊಗರು ಉದ್ಘಾಟಿಸಿದರು. ಶಾಹುಲ್ ಹಮೀದ್ ಉಜಿರೆ, ನೌಶಾದ್ ಪೋಲ್ಯ, ಬಶೀರ್ ಇಂದ್ರಾಜೆ, ಶಂಸುದ್ದೀನ್ ಬೈರಿಕಟ್ಟೆ ಶುಭ ಹಾರೈಸಿದರು.

ಖಮರುದ್ದೀನ್ ಗೂಡಿನಬಳಿ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ರಾಷ್ಟ್ರೀಯ ಸಮಿತಿ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಸ್ವಾಗತಿಸಿ ಅಲೀ ಕನ್ಯಾನ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)