varthabharthi


ಬೆಂಗಳೂರು

ರಸ್ತೆ ಗುಂಡಿಗಳು ಕಂಡುಬಂದಲ್ಲಿ ಫೋಟೋ ಸಹಿತ ದೂರು ನೀಡಿ: ಬಿಬಿಎಂಪಿ ಸೂಚನೆ

ವಾರ್ತಾ ಭಾರತಿ : 23 Nov, 2022

ಫೈಲ್ ಚಿತ್ರ

ಬೆಂಗಳೂರು, ನ.23: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿಯಲ್ ಹಾಗೂ ವರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಕಂಡುಬಂದಲ್ಲಿ ನೇರವಾಗಿ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 2656 6362 ಅಥವಾ 2297 5703ಗೆ ಸಾರ್ವಜನಿಕರು ದೂರನ್ನು ದಾಖಲಿಸಬಹುದು ಎಂದು ಬಿಬಿಎಂಪಿ ಪ್ರಕಟನೆ ಹೊರಡಿಸಿದೆ.

ಹಾಗೆಯೇ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ವಾಟ್ಸಪ್ ಸಂಖ್ಯೆ 94806 85704ಗೆ ಜಿಯೋ ಲೊಕೇಷನ್(ವಿಳಾಸ) ಇರುವ ರಸ್ತೆ ಗುಂಡಿಗಳ ಭಾವಚಿತ್ರಗಳು ವಾಟ್ಸಪ್ ಸಂಖ್ಯೆಗೆ ಕಳುಹಿಸಬಹುದು ಎಂದು ತಿಳಸಿದೆ.

ದಕ್ಷಿಣ ವಲಯ ವ್ಯಾಪ್ತಿಯಲ್ಲಿರುವ ಒಟ್ಟು 6 ಕ್ಷೇತ್ರ (ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸನವಗುಡಿ, ವಿಜಯನಗರ, ಚಿಕ್ಕಪೇಟೆ)ಗಳಲ್ಲಿ 48 ಹೊಸ ವಾರ್ಡ್‍ಗಳಿದ್ದು, ವಾರ್ಡ್‍ಗಳ ವ್ಯಾಪ್ತಿಯಲ್ಲಿ ಎಲ್ಲಿ ಆರ್ಟಿರೀಯಲ್, ಸಬ್-ಆರ್ಟಿರೀಯಲ್ ಮತ್ತು ವಾರ್ಡ್ ರಸ್ತೆಗಳಲ್ಲಿ ಇದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)