varthabharthi


ಕ್ರೀಡೆ

FIFA ವಿಶ್ವಕಪ್: ಪಂದ್ಯದ ಬಳಿಕ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಜನರ ಮನಗೆದ್ದ ಜಪಾನ್ ಫುಟ್ಬಾಲ್ ಅಭಿಮಾನಿಗಳು!

ವಾರ್ತಾ ಭಾರತಿ : 24 Nov, 2022

ದೋಹಾ: ಜಪಾನ್ ತಂಡ ಬುಧವಾರದಂದು ನಡೆದ  FIFA ವಿಶ್ವಕಪ್ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಜರ್ಮನಿಗೆ ಆಘಾತ ನೀಡಿದ ನಂತರ  ಜಪಾನಿನ ಫುಟ್ಬಾಲ್ ಅಭಿಮಾನಿಗಳು ಭಾರೀ ಸಂಭ್ರಮ ಪಟ್ಟರು. ಜಪಾನೀಯರು   ಪಂದ್ಯ ಮುಗಿದ ನಂತರ ತಮ್ಮಲ್ಲಿನ ಸ್ವಚ್ಚತೆಯ ಪ್ರಜ್ಞೆಯನ್ನು ಮಾತ್ರ ಮರೆಯಲಿಲ್ಲ.   ಕ್ರೀಡಾಂಗಣದಿಂದ ಹೊರ ಹೋಗುವ ಮೊದಲು ಜಪಾನೀಯರು ಕಸವನ್ನು ಸಂಗ್ರಹಿಸಿ ತಾವಿದ್ದ ಸ್ಥಳವನ್ನು ಸ್ವಚ್ಛಗೊಳಿಸಿದರು.

ಖಲೀಫಾ ಅಂತರ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರ್ಮನ್ ತಂಡ ವಿರುದ್ದ ಮೊದಲ ಗೋಲಿನ ಹಿನ್ನಡೆಯಿಂದ ಚೇತರಿಸಿಕೊಂಡ ಜಪಾನ್ ದ್ವಿತೀಯಾರ್ಧದಲ್ಲಿ ಎರಡು ಗೋಲುಗಳನ್ನು ಹೊಡೆದು 2-1 ಅಂತರದಿಂದ ಜಯ ಸಾಧಿಸಿತ್ತು. ಜಪಾನ್  ತಂಡ ಅಮೋಘ ಗೆಲುವು ದಾಖಲಿಸಿದ  ನಂತರ 'ಬ್ಲೂ ಬ್ರಿಗೇಡ್' ನ ಅಭಿಮಾನಿಗಳು ಸ್ಟೇಡಿಯಮ್ ಅನ್ನು  ಸ್ವಚ್ಛಗೊಳಿಸಿದರು. ಕ್ರೀಡಾಂಗಣವನ್ನು ಖಾಲಿ ಮಾಡುವ ಮೊದಲು ತ್ಯಾಜ್ಯ ಚೀಲಗಳಲ್ಲಿ ಎಲ್ಲಾ ಕಸವನ್ನು ಸಂಗ್ರಹಿಸಿದರು.

ವೈರಲ್ ಆಗಿರುವ ವೀಡಿಯೊದಲ್ಲಿ, ಜಪಾನ್ ಅಭಿಮಾನಿಗಳು ತಾವು ಪಂದ್ಯ ವೀಕ್ಷಿಸಿದ್ದ ಸ್ಟ್ಯಾಂಡ್‌ ನಲ್ಲಿರುವ  ಕಸವನ್ನು ಎತ್ತಿಕೊಂಡು ನೀಲಿ ತ್ಯಾಜ್ಯ ಚೀಲಗಳಲ್ಲಿ ಹಾಕುತ್ತಿರುವುದು ಕಂಡುಬಂದಿದೆ.

ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ನಡೆದ 2018 ರ ವಿಶ್ವಕಪ್‌ನಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿತ್ತು. ಜಪಾನ್ ತಂಡ  ಬೆಲ್ಜಿಯಂ ವಿರುದ್ಧ 3-2 ಸೋಲಿನ ಹೊರತಾಗಿಯೂ ಜಪಾನಿನ ಫುಟ್ಬಾಲ್ ಅಭಿಮಾನಿಗಳು  ಪಂದ್ಯ ಮುಗಿದ ನಂತರ ಸ್ಟೇಡಿಯಮ್ ಅನ್ನು  ಸ್ವಚ್ಛಗೊಳಿಸಿ ಎಲ್ಲರ ಹೃದಯ ಗೆದ್ದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)