varthabharthi


ಉಡುಪಿ

ನ.27ರಂದು ಉಡುಪಿ ನಾಗರಿಕರಿಗೆ ಅಂಗಾಂಗ ದಾನ ಮಾಹಿತಿ ಕಾರ್ಯಾಗಾರ

ವಾರ್ತಾ ಭಾರತಿ : 24 Nov, 2022

ಉಡುಪಿ, ನ.24: ರಾಷ್ಟ್ರೀಯ ಅಂಗಾಂಗ ದಿನದ ಆಚರಣೆಯ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಹಾಗೂ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಜಂಟಿಯಾಗಿ ಉಡುಪಿಯ ನಾಗರಿಕರಿಗಾಗಿ ಮಧುಮೇಹ ಕಾಯಿಲೆ  ಹಾಗೂ ಅಂಗಾಂಗ ದಾನದ ಮಹತ್ವದ ಕುರಿತು ಮಾಹಿತಿ ಕಾರ್ಯಾಗಾರವನ್ನು ನ.27ರ ಬೆಳಗ್ಗೆ 9 ಗಂಟೆಗೆ ನಾಯರ್‌ಕೆರೆಯ ಐಎಂಎ ಭವನದಲ್ಲಿ ಆಯೋಜಿಸಲಾಗಿದೆ.

ಇದರೊಂದಿಗೆ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಸಹ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲಿ ಚ್ಛಿಸುವವರು ನ.26ರೊಳಗೆ ಮೊಬೈಲ್ ಸಂಖ್ಯೆ: 9242821215ಕ್ಕೆ ಕರೆ ಮಾಡಿ ಹೆಸರು ನೊಂದಾಯಿಸಿ ಕೊಳ್ಳುವಂತೆ  ಎಂದು ಐಎಂಎ ಉಡುಪಿ-ಕರಾವಳಿಯ ಅಧ್ಯಕ್ಷ ಡಾ.ಪಿ.ವಿ. ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)