varthabharthi


ರಾಷ್ಟ್ರೀಯ

ಎಸ್‌ಐಟಿ ನೋಟಿಸ್‌ ಗೆ ತೆಲಂಗಾಣ ಹೈಕೋರ್ಟ್‌ ತಡೆ

ತೆಲಂಗಾಣ ಶಾಸಕರಿಗೆ ಆಮಿಷ ಪ್ರಕರಣ: ಸದ್ಯಕ್ಕೆ ಬಿ.ಎಲ್‌ ಸಂತೋಷ್‌ ವಿಚಾರಣೆಯಿಲ್ಲ

ವಾರ್ತಾ ಭಾರತಿ : 25 Nov, 2022

Photo: PTI

ಹೈದರಾಬಾದ್: ಶಾಸಕರ ಬೇಟೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ನೀಡಿದ್ದ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41-ಎ ಅಡಿಯಲ್ಲಿ ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಯಾವ ಆಧಾರದ ಮೇಲೆ ತನಗೆ ಸಮನ್ಸ್ ನೀಡಲಾಗಿದೆ ಎಂಬುದನ್ನು ತಿಳಿಸದ ಕಾರಣ ನೋಟಿಸ್ ರದ್ದುಗೊಳಿಸುವಂತೆ ಸಂತೋಷ್ ನ್ಯಾಯಾಲಯಕ್ಕೆ ಮನವಿ ಮಾಡಿದ ನಂತರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಅಗತ್ಯ ವಿಚಾರಗಳ ಕೊರತೆಯನ್ನು ಉಲ್ಲೇಖಿಸಿ ನ್ಯಾಯಾಲಯವು ನೋಟಿಸ್‌ಗೆ ತಡೆಯಾಜ್ಞೆ ನೀಡಿತು, ಸೆಕ್ಷನ್ 41-ಎ ಅಡಿಯಲ್ಲಿ ನೋಟಿಸ್‌ಗೆ ಯಾವ ಸಾಕ್ಷ್ಯ ಅಥವಾ ಅನುಮಾನ ಅಥವಾ ಯಾವ ಆಧಾರದ ಮೇಲೆ ವ್ಯಕ್ತಿಯನ್ನು ಕರೆಸಲಾಗುತ್ತಿದೆ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿದರು.

ಸಂತೋಷ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಕಾಶ್ ರೆಡ್ಡಿ ಅವರ ಹೇಳಿಕೆಯ ಪ್ರಕಾರ, ಎಸ್‌ಐಟಿ ಈ ಯಾವುದನ್ನೂ ನೋಟಿಸ್‌ನಲ್ಲಿ ಉಲ್ಲೇಖಿಸಿಲ್ಲ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)