varthabharthi


ಬೆಂಗಳೂರು

ಬೆಂಗಳೂರು: ಮಗನನ್ನೇ ಹತ್ಯೆಗೈದು ಪೊಲೀಸರಿಗೆ ಶರಣಾದ ತಂದೆ!

ವಾರ್ತಾ ಭಾರತಿ : 26 Nov, 2022

ಸಾಂದರ್ಭಿಕ ಚಿತ್ರ

ಬೆಂಗಳೂರು (Bengaluru), ನ. 26: ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ತಂದೆಯೇ ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯ ತಾಲೂಕಿನ ಅನುಗೊಂಡನಹಳ್ಳಿಯ ದೇವಾಲಪುರದ ಪುತ್ರ ತ್ಯಾಗರಾಜನನ್ನು ಕೊಂದ ತಂದೆ ಮುನಿಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ. ಪುತ್ರ ತ್ಯಾಗರಾಜ(38) ಪ್ರತಿ ದಿನ ಮದ್ಯ ಸೇವಿಸಿ ಬಂದು ತಂದೆ ಮುನಿಸ್ವಾಮಿ(65) ಮತ್ತು ತಾಯಿ ಜತೆಗೆ ಜಗಳ ತೆಗೆಯುತ್ತಿದ್ದ. ಮದ್ಯಪಾನಕ್ಕೆ ಹಣ ಕೊಡದಿದ್ದರೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮುನಿಸ್ವಾಮಿ ದಂಪತಿ ಮಗನ ಕಿರುಕುಳದಿಂದ ಬೇಸತ್ತು, ಮಗಳ ಮನೆ ಸೇರಿಕೊಂಡಿದ್ದರೆನ್ನಲಾಗಿದೆ. 

ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಶಾಸಕರ ವಿರುದ್ಧ ದೂರು ನೀಡಿದ್ದೆ: ವಿಜಯಾನಂದ

ಅಲ್ಲಿಗೂ ಬಂದು ಆಶ್ರಯ ಪಡೆದಿದ್ದ ತಂದೆ ಮೇಲೆಯೇ ಹಣಕ್ಕಾಗಿ ಹಲ್ಲೆಗೆ ಮುಂದಾಗುತ್ತಿದ್ದ. ಎಲ್ಲ ಕಡೆ ಮಗನ ಕಿರುಕುಳದಿಂದ ಬೇಸರಗೊಂಡಿದ್ದ ತಂದೆ, ತ್ಯಾಗರಾಜ ಮೇಲೆ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)