varthabharthi


ಬೆಂಗಳೂರು

ಬ್ಯಾಂಕಿಗೆ ನುಗ್ಗಿ ‘ಗ್ರಾಹಕರ ಚಿನ್ನ ಕಳವು’

ವಾರ್ತಾ ಭಾರತಿ : 27 Nov, 2022

ಬೆಂಗಳೂರು, ನ.27: ಬ್ಯಾಂಕ್‍ವೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳ ತಂಡ, ಸಾಲ ಪಡೆಯಲು ಗ್ರಾಹಕರು ನೀಡಿದ್ದ ಚಿನ್ನಾಭರಣ ಸೇರಿದಂತೆ ನಗದು ದೋಚಿ ಪರಾರಿಯಾಗಿರುವ ಘಟನೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ ಈ ದರೋಡೆ ನಡೆದಿದ್ದು, ಶುಕ್ರವಾರ ರಾತ್ರಿ ಬ್ಯಾಂಕಿನ ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಬ್ಯಾಂಕಿನಲ್ಲಿದ್ದ 5 ಕೆಜಿ ಚಿನ್ನ, 14 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. 

ಬ್ಯಾಂಕಿನ ಸಿಸಿ ಟಿವಿಯಲ್ಲಿ ದರೋಡೆಕೋರರ ಕೃತ್ಯ ಸೆರೆಯಾಗಿದೆ. ದರೋಡೆಕೋರರು 3 ಕೋಟಿ 50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 14 ಲಕ್ಷ ರೂ. ಹಣ ದೋಚಿದ್ದಾರೆ ಎಂದು ಬ್ಯಾಂಕಿನ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಶನಿವಾರವಾದ ರಜೆಯನ್ನು ನೋಡಿಕೊಂಡೇ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ದರೋಡೆ ನಡೆದಿರುವುದು ರವಿವಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)