ಕ್ರೀಡೆ
ಫಿಫಾ ವಿಶ್ವಕಪ್: ಬ್ರೆಝಿಲ್ ಪ್ರಿ-ಕ್ವಾರ್ಟರ್ ಫೈನಲ್ಗೆ ಪ್ರವೇಶ
ವಾರ್ತಾ ಭಾರತಿ : 28 Nov, 2022

Photo:twitter
ದೋಹಾ, ನ.28: ಫಿಫಾ ವಿಶ್ವಕಪ್ನ ಗ್ರೂಪ್ ‘g’ ಪಂದ್ಯದಲ್ಲಿ ಸ್ವಿಟ್ಸರ್ಲ್ಯಾಂಡ್ ತಂಡವನ್ನು 1-0 ಅಂತರದಿಂದ ಸದೆಬಡಿದಿರುವ ಬ್ರೆಝಿಲ್ ಫುಟ್ಬಾಲ್ ತಂಡ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ಪ್ರಿ-ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.
974 ಸ್ಟೇಡಿಯಮ್ನಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಉಭಯ ತಂಡಗಳು ಮೊದಲಾರ್ಧದ ಅಂತ್ಯದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿದ್ದವು.
ದ್ವಿತೀಯಾರ್ಧದ 83ನೇ ನಿಮಿಷದಲ್ಲಿ ಕ್ಯಾಸೆಮಿರೊ ಗಳಿಸಿದ ಏಕೈಕ ಗೋಲು ನೆರವಿನಿಂದ ಬ್ರೆಝಿಲ್ ಕೊನೆಗೂ 1-0 ಮುನ್ನಡೆ ಸಾಧಿಸಿತು. ಈ ಗೆಲುವಿನೊಂದಿಗೆ ಒಟ್ಟು 6 ಅಂಕವನ್ನು ಗಳಿಸಿದ ಬ್ರೆಝಿಲ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)