varthabharthi


ಅಂತಾರಾಷ್ಟ್ರೀಯ

ಇರಾನ್ ವಿಶ್ವಕಪ್ ಪಂದ್ಯ ಗೆದ್ದ ಬಳಿಕ 700 ಕೈದಿಗಳ ಬಿಡುಗಡೆ

ವಾರ್ತಾ ಭಾರತಿ : 28 Nov, 2022

Photo: Twitter

ಟೆಹ್ರಾನ್, ನ.28: ಖತರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಇರಾನ್‌ನ ತಂಡ ವೇಲ್ಸ್ ಎದುರು 2-0 ಗೋಲುಗಳ ಅಂತರದಿಂದ ಗೆದ್ದ ಬಳಿಕ ಇರಾನ್‌ನ ಆಡಳಿತ 700ಕ್ಕೂ ಅಧಿಕ ಕೈದಿಗಳ ಬಿಡುಗಡೆಗೆ ಆದೇಶಿಸಿದೆ ಎಂದು ವರದಿಯಾಗಿದೆ.

 ಇತ್ತೀಚೆಗೆ ದೇಶದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಯ ಸಂದರ್ಭ ಬಂಧಿತರಾದವರೂ ಇದರಲ್ಲಿ ಸೇರಿದ್ದಾರೆ ಎಂದು ಇರಾನ್‌ನ ನ್ಯಾಯಾಂಗ ಇಲಾಖೆಯ ಮಿಝಾನ್ ವೆಬ್‌ಸೈಟ್ ಸೋಮವಾರ ವರದಿ ಮಾಡಿದೆ. ಈ ಮಧ್ಯೆ, ಪ್ರತಿಭಟನೆಗೆ ಬೆಂಬಲ ನೀಡಿದ್ದರಿಂದ ಬಂಧನಕ್ಕೆ ಒಳಗಾಗಿದ್ದ ಇರಾನ್ ನಟ ಹೆಂಗಮೇಹ್ ಘಜಿಯಾನಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಅಂತರಾಷ್ಟ್ರೀಯ ಫುಟ್‌ಬಾಲ್ ಆಟಗಾರ ವೊರಿಯಾ ಘಫೌರಿ ಮತ್ತು ಭಿನ್ನಮತೀಯ ಹುಸೇನ್ ರೊನಘಿ, ಟಿವಿ ನಿರೂಪಕ ಮುಹಮ್ಮದ್ ಶಹ್ರಿಯಾರಿಯನ್ನೂ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿಸಂಸ್ಥೆ ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)