varthabharthi


ರಾಷ್ಟ್ರೀಯ

ಲೈಗರ್‌ ಚಿತ್ರದ ಬಂಡವಾಳ‌ ಹೂಡಿಕೆ ಕುರಿತು ಇಡಿ ವಿಚಾರಣೆ ಎದುರಿಸಿದ ನಟ ವಿಜಯ್ ದೇವರಕೊಂಡ

ವಾರ್ತಾ ಭಾರತಿ : 30 Nov, 2022

Photo: Twitter/GskMedia_PR

ಹೈದರಾಬಾದ್: ಲೈಗರ್‌ ಚಿತ್ರದ ಮೇಲೆ ಬಂಡವಾಳ ಹೂಡಿಕೆಯ ಮೂಲದ ಕುರಿತು ನಟ ವಿಜಯ್ ದೇವರಕೊಂಡ ಅವರನ್ನು ಇಂದು ಬೆಳಿಗ್ಗೆ 8.30 ರಿಂದ ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳನ್ನುಲ್ಲೇಖಿಸಿ ndtv.com ವರದಿ ಮಾಡಿದೆ.
ಪೂರಿ ಜಗನ್ನಾಥ್‌ ನಿರ್ದೇಶನದ ಲೈಗರ್‌ ಚಿತ್ರವನ್ನು ಸುಮಾರು ₹ 100 ಕೋಟಿ ಬಜೆಟ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಅಮೇರಿಕನ್ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಸಹ ನಟಿಸಿರುವ ಈ ಚಿತ್ರವು ಥಿಯೇಟರುಗಳಲ್ಲಿ ಉತ್ತಮವಾಗಿ ಓಡಿರಲಿಲ್ಲ. ಅಲ್ಲದೆ, ಕಳಪೆ ಚಿತ್ರ ಎಂಬ ವಿಮರ್ಶೆಯನ್ನೂ ಪಡೆದುಕೊಂಡಿತ್ತು.

ಲೈಗರ್‌ ಚಿತ್ರದ ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ನವೆಂಬರ್ 17 ರಂದು ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆಯ ಕುರಿತು ವಿಚಾರಣೆ ನಡೆಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)