ರಾಷ್ಟ್ರೀಯ
ಸೆಪ್ಟಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.6.3ರಷ್ಟು ಬೆಳವಣಿಗೆ
ವಾರ್ತಾ ಭಾರತಿ : 30 Nov, 2022

ಹೊಸದಿಲ್ಲಿ,ನ.30: ಪ್ರಸಕ್ತ ವಿತ್ತವರ್ಷದ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ.6.3ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ.13.5ರಷ್ಟಿತ್ತು.
2021-22ರ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಜಿಡಿಪಿ(GDP)ಯು ಶೇ.8.4ರಷ್ಟು ಪ್ರಗತಿಯನ್ನು ಸಾಧಿಸಿತ್ತು ಎಂದು ರಾಷ್ಟ್ರೀಯ ಅಂಕಿ ಅಂಶ ಕಚೇರಿಯು ತಿಳಿಸಿದೆ.
ಭಾರತೀಯ ಆರ್ಥಿಕತೆಯು ಪ್ರಸಕ್ತ ವಿತ್ತವರ್ಷದ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇ.13.5ರ ಅರ್ಧದಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದರು.
ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ.6.5ರಷ್ಟು ಬೆಳವಣಿಗೆಯಾಗಲಿದೆ ಎಂದು ರೇಟಿಂಗ್ ಏಜೆನ್ಸಿ ಇಕ್ರಾ ಅಂದಾಜಿಸಿದ್ದರೆ,ಎಸ್ಬಿಐ ತನ್ನ ವರದಿಯಲ್ಲಿ ಶೇ.5.8ರ ಬೆಳವಣಿಗೆ ದರವನ್ನು ಅಂದಾಜಿಸಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)