varthabharthi


ರಾಷ್ಟ್ರೀಯ

ರಸ್ತೆ ಅಪಘಾತದಲ್ಲಿ ಮೂವರು ಪತ್ರಕರ್ತರು ಮೃತ್ಯು

ವಾರ್ತಾ ಭಾರತಿ : 30 Nov, 2022

ವಿದಿಶಾ,ನ.30: ಮಧ್ಯಪ್ರದೇಶದ ರಾಯಸೇನ್(Raisen) ಜಿಲ್ಲೆಯಲ್ಲಿ ಸೋಮವಾರ ರಾತ್ರಿ ವೇಗದಿಂದ ಚಲಿಸುತ್ತಿದ್ದ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಸ್ಥಳೀಯ ಪತ್ರಕರ್ತರು ಮೃತಪಟ್ಟಿದ್ದಾರೆ.

ಲಂಬಾಖೇಡಾ ಸಮೀಪ ತಿರುವೊಂದರಲ್ಲಿ ಈ ಅಪಘಾತ ಸಂಭವಿಸಿದ್ದು,ರಾಜೇಶ್ ಶರ್ಮಾ(Rajesh Sharma),ಸುನಿಲ್ ಶರ್ಮಾ (Sunil Sharma)ಮತ್ತು ನರೇಂದ್ರ ದೀಕ್ಷಿತ್(Narendra Dixit)  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅಪಘಾತದ ನಂತರ ಚಾಲಕ ಲಾರಿ ಸಹಿತ ಪರಾರಿಯಾಗಿದ್ದು,ಬಳಿಕ ಬರ್ಖೇಡಿ ಬಳಿ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮೃತ ಪತ್ರಕರ್ತರು ತಮ್ಮ ಸಾಪ್ತಾಹಿಕದ ಮುದ್ರಣ ಕಾರ್ಯಕ್ಕಾಗಿ ಭೋಪಾಳಕ್ಕೆ ತೆರಳಿದ್ದು,ಅಲ್ಲಿಂದ ಬೈಕಿನಲ್ಲಿ ಮರಳುವಾಗ ಅಪಘಾತ ಸಂಭವಿಸಿದೆ.

ಮೂವರು ಪತ್ರಕರ್ತರ ಸಾವಿಗೆ ಸಂತಾಪಗಳನ್ನು ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು,ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲ.ರೂ. ಪರಿಹಾರವನ್ನು ಪ್ರಕಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)