varthabharthi


ರಾಷ್ಟ್ರೀಯ

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಮುಸ್ಲಿಮರನ್ನು ರಾಕ್ಷಸರಂತೆ ತೋರಿಸಿದೆ: ಮೆಹಬೂಬಾ ಮುಫ್ತಿ

ವಾರ್ತಾ ಭಾರತಿ : 30 Nov, 2022

ಅಹ್ಮದಾಬಾದ್, ನ. 30: ‘ದಿ ಕಾಶ್ಮೀರ್ ಫೈಲ್ಸ್’ (The Kashmir Files)ಅನ್ನು ಟೀಕಿಸಿದ ಇಸ್ರೇಲ್ ನ  ಚಿತ್ರ ನಿರ್ದೇಶಕ ನಡಾವ್ ಲಪಿಡ್ (Nadav Lapid)ಅವರಿಗೆ ಪಿಡಿಪಿ ವರಿಷ್ಠೆ, ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti)ಬುಧವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಆಡಳಿತ ಪಕ್ಷ ಮುಸ್ಲಿಮರನ್ನು ಮುಖ್ಯವಾಗಿ ಕಾಶ್ಮೀರಿಗಳನ್ನು ರಾಕ್ಷಸರಂತೆ ಬಿಂಬಿಸಿ ಪ್ರಚಾರ ಮಾಡಿದ ಚಿತ್ರವಾಗಿದೆ ಎಂದು ಅವರು ಹೇಳಿದ್ದಾರೆ. ‘‘ಕೊನೆಗೂ ಒಬ್ಬರು ಕಾಶ್ಮೀರ್ ಫೈಲ್ಸ್ ಅನ್ನು ಪ್ರಚಾರಕ್ಕೆ ಮಾಡಿದ ಚಿತ್ರ ಎಂದು ಕರೆದಿದ್ದಾರೆ. ಈ ಚಿತ್ರದಲ್ಲಿ ಆಡಳಿತ ಪಕ್ಷ ಮುಸ್ಲಿಮರನ್ನು ಮುಖ್ಯವಾಗಿ ಕಾಶ್ಮೀರಿಗಳನ್ನು ರಾಕ್ಷಸರಂತೆ ತೋರಿಸಿದೆ.

ಇದರಿಂದ ಪಂಡಿತರು ಹಾಗೂ ಮುಸ್ಲಿಮರ ನಡುವಿನ ಕಂದಕ ಆಳವಾಗಿದೆ. ಸತ್ಯವನ್ನು ಮರೆ ಮಾಚಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವುದು ದುಃಖಕರವಾಗಿದೆ’’ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)