varthabharthi


ಬೆಂಗಳೂರು

ಈರುಳ್ಳಿ ಬೆಲೆ ದಿಢೀರ್ ಕುಸಿತ: ಕಾರಣ ಏನು ಗೊತ್ತೇ ?

ವಾರ್ತಾ ಭಾರತಿ : 1 Dec, 2022

ಬೆಂಗಳೂರು: ರಾಜ್ಯಾದ್ಯಂತ ಹಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಅಕಾಲಿಕ ಮಳೆ ಕಾರಣದಿಂದ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ದಿಢೀರನೇ ಕುಸಿದಿದೆ.

ಬೆಂಗಳೂರಿಗರಿಂದ ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಹೆಚ್ಚುತ್ತಿದ್ದರೂ, ಸ್ವಲ್ಪ ಹಾಳಾದ ಈರುಳ್ಳಿ ಬೆಲೆ ಕ್ವಿಂಟಲ್‍ಗೆ 100 ರೂಪಾಯಿಗೆ ಇಳಿದಿದೆ. ಮಧ್ಯಮ ಹಾಗೂ ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‍ಗೆ 2000 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.

ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಕೆಜಿ ಈರುಳ್ಳಿ ದರ 75 ರಿಂದ 100 ರೂಪಾಯಿ ತಲುಪುತ್ತದೆ ಎಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆ ವರ್ತಕರು ಹೇಳುತ್ತಾರೆ. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ ಈ ಚಳಿಗಾಲದಲ್ಲಿ ಈರುಳ್ಳಿ 10 ರಿಂದ 25 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ನೆರೆಯ ಆಂಧ್ರದಲ್ಲಿ ಶೇಕಡ 90ರಷ್ಟು ಬೆಳೆ ಹಾಳಾಗಿದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ಬೆಂಗಳೂರಿಗೆ ಈರುಳ್ಳಿ ಬರುತ್ತಿದೆ ಎಂದು ಈರುಳ್ಳಿ- ಆಲೂಗಡ್ಡೆ ಸಗಟು ಮಾರಾಟಗಾರರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್ ಹೇಳುತ್ತಾರೆ.

ಮೋಡ ಕವಿದ ವಾತಾವರಣ ಹಾಗೂ ಅಧಿಕ ತೇವಾಂಶದ ಕಾರಣದಿಂದಾಗಿ ಈರುಳ್ಳಿ ದಾಸ್ತಾನು ಕೂಡಾ ಕಷ್ಟಕರವಾಗಿದ್ದು, ಫಂಗಸ್ ದಾಳಿಗೆ ತುತ್ತಾಗುತ್ತದೆ ಎಂದು ಅವರು ಹೇಳುತ್ತಾರೆ. ಬೇಡಿಕೆಗೆ ಬೇಕಾದಷ್ಟೇ ಈರುಳ್ಳಿ ತರಿಸಿಕೊಳ್ಳುತ್ತಿದ್ದೇವೆ ಹಾಗೂ ದಾಸ್ತಾನು ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬೇಡಿಕೆ ಕುಸಿದಿರುವುದೂ ಬೆಲೆ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸುತ್ತಾರೆ.

ರೈತರು ಪ್ರತಿ ಕ್ವಿಂಟಲ್‍ಗೆ ಕೇವಲ 8 ರಿಂದ 10 ರೂಪಾಯಿಗೂ ಮಾರಾಟ ಮಾಡುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗ, ಕೇವಲ ಹಾಳಾಗಿರುವ ಈರುಳ್ಳಿ ಮಾತ್ರ ಈ ದರದಲ್ಲಿ ಮಾರಾಟವಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)